ಬೆಂಗಳೂರು:ಬೆಂಗಳೂರು ವಿಶ್ವ ವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಿಂದ ಇಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆನ್ ಲೈನ್ ನಡೆಸಲಾಯಿತು.
ಪ್ರಸಿದ್ಧ ರಂಗಭೂಮಿ ಹಾಗೂ ಕಿರುತೆರೆಯ ಕಲಾವಿದರಾದ ಡಾ. ಬಿ.ವಿ. ರಾಜಾರಾಂ ರಂಗಭೂಮಿಯಲ್ಲಿ ಸೌಂದರ್ಯ ಪ್ರಜ್ಞೆ ಎಂಬ ವಿಶೇಷ ಉಪನ್ಯಾಸವನ್ನು ನಡೆಸಿಕೊಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಆನ್ಲೈನ್ನಲ್ಲಿ ರಂಗಭೂಮಿ ಪಾಠ… ಬೆಂಗಳೂರು ವಿವಿಯಿಂದ ವಿಶೇಷ ಉಪನ್ಯಾಸ - Bangalore VV latest news
ಬೆಂಗಳೂರು ವಿಶ್ವ ವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಿಂದ ಇಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ನಡೆಸಲಾಯಿತು.
ಬಳಿಕ ಮಾತನಾಡಿದ ಅವರು, ಸೌಂದರ್ಯ ಪ್ರಜ್ಞೆ ಎಂಬುದು ತುಂಬಾ ಸೂಕ್ಷ್ಮವಾದ ವಿಚಾರ. ಈ ಸೂಕ್ಷ್ಮತೆಯ ಆಳವನ್ನು ಅರಿತಿರುವ ಡಾ. ಬಿ.ವಿ.ರಾಜಾರಾಂ ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆಸಿಕೊಡುತ್ತಿರುವುದು ಬಹಳ ಹೆಮ್ಮೆಯ ಸಂಗತಿ. ಅಜಿತನ ಸಾಹಸಗಳು, ಕ್ರೇಜಿ ಕರ್ನಲ್, ಮಾಯಾಮೃಗ ಮುಂತಾದ ಯಶಸ್ವಿ ಧಾರಾವಾಹಿಗಳಲ್ಲಿ ನಟಿಸಿ ಸರ್ಕಾರದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಕರ್ನಾಟಕದ ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ಜ್ಞಾನದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ನಂತರ ಡಾ.ಬಿ.ವಿ.ರಾಜಾರಾಂ ಮಾತನಾಡಿ, ಸೌಂದರ್ಯ ಪ್ರಜ್ಞೆ ಎಂಬುದು ರಂಗಭೂಮಿಯ ಹೊಳಹುಗಳನ್ನು ಅಭಿವ್ಯಕ್ತಿ ಪಡಿಸಲು ಹೇಗೆ ಸಹಾಯಕವಾಗಿದೆ ಎಂಬುದನ್ನು ಹಾಗೂ ಅಂತಃ ಪ್ರಜ್ಞೆಯಿಂದ ಈ ಒಂದು ಸೌಂದರ್ಯ ಶಾಸ್ತ್ರವನ್ನು ಅರ್ಥೈಸಿಕೊಂಡಲ್ಲಿ ಕಲಾವಿದನ ಪ್ರದರ್ಶನವು ಸಂಪೂರ್ಣವಾಗಿ ಮೆರುಗು ಪಡೆಯುತ್ತದೆ ಎಂದರು.