ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಕೂಡಲೇ ಸರ್ಕಾರಿ ಜಾಗ ರಕ್ಷಣೆ ಸಂಬಂಧ ಸೂಕ್ತ ಕ್ರಮ ಕೈಗೊಂಡು 30 ದಿನದಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸೂಚನೆ ನೀಡಿದ್ದಾರೆ.
ಕಂದಾಯ ಭವನದಲ್ಲಿ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಬೆಂಗಳೂರು ನಗರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಇಲಾಖೆಯ ಸಮಗ್ರ ಮಾಹಿತಿ ಪಡೆದುಕೊಂಡರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಒತ್ತುವರಿ ವಿಚಾರ ಸಂಬಂಧ ಎ ಟಿ ರಾಮಸ್ವಾಮಿ ವರದಿ ಕುರಿತು ವಿವರಣೆ ನೀಡಿದ ಅಧಿಕಾರಿಗಳು 33,887.91 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. 21 ಸಾವಿರ ಎಕರೆ ಒತ್ತುವರಿ ತೆರವು ಮಾಡೋಕೆ ಆಗ್ತಿಲ್ಲ. ತಕರಾರು ಇರೋದ್ರಿಂದ ತೆರವು ಕಷ್ಟವಾಗಿದೆ. ಉಳಿದ ಭೂಮಿಯನ್ನ ನಾವು ತೆರವುಗೊಳಿಸಿದ್ದೇವೆ. 7881.04 ಗುಂಟೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ. 14,456 ಎಕರೆ ತೆರವು ಮಾಡೋಕೆ ನಮಗೆ ಅವಕಾಶವಿದೆ ಎಂದು ಎ ಟಿ ರಾಮಸ್ವಾಮಿ ವರದಿ ಬಗ್ಗೆ ಸಚಿವ ದೇಶಪಾಂಡೆ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ನಾವು ವಶಕ್ಕೆ ಪಡೆದಿದ್ದೇವೆ. ಕೆಲವು ಕಡೆ ಪೆನ್ಸಿಂಗ್ ಮಾಡಿದ್ದೇವೆ, ಇನ್ನೂ ಕೆಲವೆಡೆ ಪೆನ್ಸಿಂಗ್ ಮಾಡಬೇಕಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್, ಸಚಿವರಿಗೆ ತಪ್ಪು ಮಾಹಿತಿಯನ್ನ ನೀಡಬೇಡಿ. 16 ಸಾವಿರ ಎಕರೆಯನ್ನೂ ವಶಕ್ಕೆ ತೆಗೆದುಕೊಂಡಿದ್ದೀರಾ? ಅದರ ದಾಖಲೆಗಳು ಎಲ್ಲಿವೆ, ಸುಳ್ಳನ್ನ ಹೇಳಿ ಸಚಿವರನ್ನ ದಾರಿ ತಪ್ಪಿಸಬೇಡಿ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ಸಚಿವರ ಮುಂದೆ ಸ್ಪೆಷಲ್ ಜಿಲ್ಲಾಧಿಕಾರಿಗಳ ಅಳಲು: