ಕರ್ನಾಟಕ

karnataka

ETV Bharat / state

ಜಸ್ಟ್​​​ 24 ಗಂಟೆ:  30 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸರು - no parking

ರಾಜಧಾನಿಯಲ್ಲಿರುವ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆಯಿಂದ ಇವತ್ತು ಮಧ್ಯಾಹ್ನ 1 ಗಂಟೆವರೆಗೆ ನಿಯಮ ಉಲ್ಲಂಘಿಸಿದ ಸವಾರರಿಗೆ ಪೊಲೀಸರು ಭಾರಿ ದಂಡ ವಿಧಿಸಿ ಚಳಿ ಬಿಡಿಸಿದ್ದಾರೆ.

ಸಾಂದರ್ಭಿಕ ಆಸ್ಪತ್ರೆ

By

Published : Sep 5, 2019, 5:36 PM IST

ಬೆಂಗಳೂರು: ನಗರದಲ್ಲಿ ಹೊಸ ಸಾರಿಗೆ ನಿಯಮ ಜಾರಿಯಾಗುತ್ತಿದ್ದಂತೆ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪರಿಷ್ಕೃತ ಜುಲ್ಮಾನೆ ವಿಧಿಸುತ್ತಿದ್ದು, 24 ಗಂಟೆಗಳಲ್ಲಿ 2,978 ಪ್ರಕರಣ ದಾಖಲಿಸಿ ಒಟ್ಟು 30.11 ಲಕ್ಷ (30,11,400) ರೂ. ದಂಡ ವಸೂಲಿ ಮಾಡಿದ್ದಾರೆ.

ರಾಜಧಾನಿಯಲ್ಲಿರುವ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆಯಿಂದ ಇವತ್ತು ಮಧ್ಯಾಹ್ನ 1 ಗಂಟೆವರೆಗೆ ನಿಯಮ ಉಲ್ಲಂಘಿಸಿದ ಸವಾರರಿಗೆ ಪೊಲೀಸರು ದಂಡ ವಿಧಿಸಿ ವಾಹನಸವಾರರಿಗೆ ಬಿಸಿ‌ ಮುಟ್ಟಿಸಿದ್ದಾರೆ.

ಅತಿ ಹೆಚ್ಚು ಟ್ರಾಫಿಕ್ ನೀತಿ ಉಲ್ಲಂಘನೆ ಮಾಡಿರುವ ಪೈಕಿ 1,518 ಹೆಲ್ಮೆಟ್ ರಹಿತ ಬೈಕ್ ಚಾಲನೆ ಕೇಸ್ ದಾಖಲಾಗಿದೆ. ಈ ಸಂಬಂಧ ಒಟ್ಟಾರೆ 15.18 ಲಕ್ಷ ರೂ. ವಸೂಲಿ ಮಾಡಲಾಗಿದೆ. ಇನ್ನು 1,121 ಹಿಂಬದಿ ಸವಾರರು ಹೆಲ್ಮೆಟ್ ರಹಿತ ಚಾಲನೆ ಮಾಡಿದ ಪ್ರಕರಣದಡಿ 11.21 ಲಕ್ಷ ರೂ. ಸಂಗ್ರಹಿಸಲಾಗಿದೆ.

ಡ್ರಂಕ್ ಅಂಡ್ ಡ್ರೈವ್,‌ ನೋ ಪಾರ್ಕಿಂಗ್, ಒನ್ ವೇ ಸಂಚಾರ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ್ದ 2,978 ಕೇಸ್ ದಾಖಲಿಸಿ ಒಟ್ಟು 30 ಲಕ್ಷ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details