ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಡುವೆ ಹುಂಡಿ ಮೇಲೆ ಕಣ್ಣು... ಒಂದೇ ರಾತ್ರಿ 2 ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ!

ಯಲಹಂಕದ ಶಿವಕೋಟೆ ಗ್ರಾಮದ ಲಕ್ಷ್ಮೀನಾರಂಸಿಂಹ ಸ್ವಾಮಿ‌ ದೇವಸ್ಥಾನದಲ್ಲಿ ಕಳ್ಳರು ನಿನ್ನೆ ತಡರಾತ್ರಿ ಹುಂಡಿ ಕಳ್ಳತನ ಮಾಡಿ ನಂತರ ಸಮೀಪದಲ್ಲೇ ಇದ್ದ ಲಕ್ಷ್ಮೀ ದೇವಸ್ಥಾನದಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ.

Bangalore: Theft in Temple
ಕಳ್ಳರಿಗೀಗ ದೇವಸ್ಥಾನದ ಹುಂಡಿ ಮೇಲೆ ಕಣ್ಣು...ಒಂದೇ ರಾತ್ರಿ ಎರಡು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ

By

Published : Apr 26, 2020, 2:26 PM IST

ಬೆಂಗಳೂರು:ಲಾಕ್​​ಡೌನ್ ಹಿನ್ನೆಲೆ ಕಳ್ಳರು ದೇವಸ್ಥಾನದ ಹುಂಡಿ ಮೇಲೆ ಕಣ್ಣಿಟ್ಟಿದ್ದು, ಸಿಲಿಕಾನ್​ ಸಿಟಿಯಲ್ಲೀಗ ದಿನೇ ದಿನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.

ಯಲಹಂಕದ ಶಿವಕೋಟೆ ಗ್ರಾಮದ ಲಕ್ಷ್ಮೀನಾರಂಸಿಂಹ ಸ್ವಾಮಿ‌ ದೇವಸ್ಥಾನದಲ್ಲಿ ಕಳ್ಳರು ನಿನ್ನೆ ತಡರಾತ್ರಿ ಹುಂಡಿ ಕಳ್ಳತನ ಮಾಡಿ ನಂತರ ಸಮೀಪದಲ್ಲೇ ಇದ್ದ ಲಕ್ಷ್ಮೀ ದೇವಸ್ಥಾನದಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಲಾಕೌಡೌನ್​ ಹೇರಿದ ಬಳಿಕ ಸಿಲಿಕಾ‌ನ್ ಸಿಟಿಯ 50ಕ್ಕೂ ಹೆಚ್ಚು ಕಡೆಗಳಲ್ಲಿ ದೇವಸ್ಥಾನ, ಮನೆಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ.

ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ

ಬಹುತೇಕ ಮಂದಿ ಲಾಕ್​​​ಡೌನ್ ಹೇರುವ ಮೊದಲೇ ಮನೆಗಳಿಗೆ ಬಾಗಿಲು ಹಾಕಿ ತಮ್ಮ-ತಮ್ಮ ಊರುಗಳಿಗೆ ತೆರಳಿದ್ದಾರೆ. ಇದನ್ನ ಸದುಪಯೋಗಪಡಿಸಿಕೊಂಡ ಖದೀಮರು ಬಹುತೇಕ ಕಡೆ ಯಾರೂ ಇಲ್ಲದ್ದನ್ನು ಗಮ‌ನಿಸಿ ಕಳ್ಳತನ ಮಾಡ್ತಿದ್ದಾರೆ. ಸದ್ಯ ಪೊಲೀಸರು ಕೂಡಾ ಸೀಲ್ ಡೌನ್ ಪ್ರದೇಶ, ಹಾಟ್ ಸ್ಪಾ ಟ್ ಪ್ರದೇಶದಲ್ಲಿ ಬ್ಯುಸಿಯಾಗಿರೋದೆ ಕಳ್ಳರ ಪಾಲಿಗೆ ದೊಡ್ಡ ವರದಾನವಾಗಿದೆ.

ABOUT THE AUTHOR

...view details