ಕರ್ನಾಟಕ

karnataka

ETV Bharat / state

100 ನವೋದ್ಯಮಗಳಿಗೆ ಇಸ್ರೋ ನೆರವು: ಸೋಮನಾಥ್‌ - ಎರಡನೇ ದಿನದ ತಂತ್ರಜ್ಞಾನ ಸಮಾವೇಶ ಉಪನ್ಯಾಸ

ಈಗಾಗಲೇ ಭಾರತದ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ - 3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ ಹೇಳಿದರು.

KN_BNG
ಎಸ್​ ಸೋಮನಾಥ್

By

Published : Nov 17, 2022, 7:00 PM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯೊಂದಿಗೆ 100 ನವೋದ್ಯಮಗಳು ನೋಂದಾಯಿಸಿಕೊಂಡಿದ್ದು, ಬಾಹ್ಯಾಕಾಶ ಸಂಶೋಧನೆಯ ಹಲವು ವಲಯಗಳಲ್ಲಿ ನೆರವು ಒದಗಿಸಲಾಗುತ್ತಿದೆ ಎಂದು ಇಸ್ರೋ ಸಂಸ್ಥೆಯ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಸಮಾವೇಶದ ಎರಡನೇ ದಿನವಾದ ಗುರುವಾರ ಅವರು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಜಾಗತಿಕ ಒಳಿತಿಗಾಗಿ ನಾವೀನ್ಯತೆ ವಿಚಾರ ಕುರಿತು ಉಪನ್ಯಾಸ ನೀಡಿದರು. ಭಾರತದ ಹಲವು ಕಂಪನಿಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮಹತ್ವದ ಪಾತ್ರ ವಹಿಸುವ ಶಕ್ತಿ ಇದೆ. ಇಸ್ರೋ ಇವುಗಳಿಗೆ ಆರಂಭದಿಂದ ಹಿಡಿದು ಅಂತ್ಯದವರೆಗೂ ಪರಿಪೋಷಣೆ ಮಾಡಲಿದೆ.

ಸದ್ಯಕ್ಕೆ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂದು ಅವರು ತಿಳಿಸಿದರು. ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ.

ಈ ನಿಟ್ಟಿನಲ್ಲಿ ಇಸ್ರೋ, ಅಮೆರಿಕದ ನಾಸಾ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯ ರಾಕೆಟ್‌ನಲ್ಲಿ ಬಳಸಲ್ಪಟ್ಟ ಕಂಪ್ಯೂಟರ್​ ಅನ್ನು ಭಾರತದಲ್ಲೇ ತಯಾರಿಸಲಾಗಿತ್ತು ಎಂದು ಅವರು ನುಡಿದರು. ಜಗತ್ತಿನ ಎಲ್ಲೆಡೆಗಳಲ್ಲೂ ಈಗ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಇಸ್ರೋ ಸಂಸ್ಥೆಯು ದೇಶದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಮತ್ತು ಆಧುನಿಕ ತಯಾರಿಕೆ ವ್ಯವಸ್ಥೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ.

ಮಿಕ್ಕಂತೆ ಉಪಗ್ರಹ ತಂತ್ರಜ್ಞಾನವನ್ನು ಮತ್ತೆ ಮುಂಚೂಣಿಗೆ ತರುವ ಪ್ರಯತ್ನಗಳು ನಡೆದಿವೆ. ಅಲ್ಲದೇ, ಪರಿಸರ ಸ್ನೇಹಿ ಮತ್ತು ಹೈಬ್ರಿಡ್‌ ಪ್ರೊಪಲ್ಶನ್‌, ಸಣ್ಣ ರಾಕೆಟ್‌ಗಳ ಉಡಾವಣೆ, ಕಾರ್ಬನ್‌ ಫೈಬರ್​ ತಂತ್ರಜ್ಞಾನ, ರೋಬೋಟಿಕ್ಸ್‌, ಡ್ರೋನ್‌, ಕ್ವಾಂಟ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೋ ಛಾಪು ಮೂಡಿಸುತ್ತಿದೆ ಎಂದು ಸೋಮನಾಥ್‌ ವಿವರಿಸಿದರು.

ಇದನ್ನೂ ಓದಿ:ನಾಲ್ಕು ವರ್ಷ ಪೂರೈಸಿದ 'ಅಗ್ನಿವೀರ'ರಿಗೆ ಇಸ್ರೋದಲ್ಲಿ ಉದ್ಯೋಗ: ಡಾ.ಸೋಮನಾಥ್

ABOUT THE AUTHOR

...view details