ಕರ್ನಾಟಕ

karnataka

ETV Bharat / state

ನಾಳೆಯಿಂದ ಬೆಂಗಳೂರು ಟೆಕ್ ಸಮ್ಮಿಟ್: ಗಮನ ಸೆಳೆಯಲಿದೆ ರೋಬೋಟಿಕ್ಸ್ - ಬೆಂಗಳೂರು ಟೆಕ್ ಸಮ್ಮಿಟ್ 2019

ಬೆಂಗಳೂರು ಟೆಕ್ ಸಮ್ಮಿಟ್- 2019 ನಾಳೆ (ನ.18) ಅರಮನೆ ಮೈದಾನದಲ್ಲಿ ಆರಂಭಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ

By

Published : Nov 17, 2019, 7:16 PM IST

ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್-2019 ನಾಳೆಯಿಂದ (ನ.18) ಮೂರು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದ್ರು.

ಡಿಸಿಎಂ ಅಶ್ವತ್ಥ್ ನಾರಾಯಣ

ಇಡೀ ವಿಶ್ವದಲ್ಲೇ ತಂತ್ರಜ್ಞಾನದಲ್ಲಿ ಬೆಂಗಳೂರು ನಾಯಕತ್ವದ ಸ್ಥಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ದೇಶದ ಅಭಿವೃದ್ದಿಗೆ ಬುನಾದಿಯಾಗಿದೆ. ತಂತ್ರಜ್ಞಾನ ಕೇವಲ ಕಂಪ್ಯೂಟರ್​ಗೆ ಮಾತ್ರ ಸೀಮಿತವಲ್ಲದೆ ಎಲ್ಲ ಕ್ಷೇತ್ರಕ್ಕೂ ಸಲ್ಲುವಂತಾಗಿದೆ ಎಂದರು.

ಈ ಬಾರಿಯ ಸಮ್ಮಿಟ್​ನಲ್ಲಿ ರೋಬೋಟಿಕ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, ರೋಬೋಟಿಕ್ ರೀ ಚಾರ್ಜ್ ಎಂಬ ಹೆಸರಿನಲ್ಲಿ ನಡೆಯಲಿದೆ‌‌. ಸಮ್ಮಿಟ್ ವೇಳೆ ಒಂಭತ್ತು ಯೂನಿಕಾನ್ಸ್​ಗಳಿಗೆ 'ಬೆಂಗಳೂರು ಇಂಪ್ಯಾಕ್ಟ್ ಅವಾರ್ಡ್' ಎಂದು ನೀಡಲಾಗುತ್ತಿದೆ ಎಂದರು.‌

ಅಮೆರಿಕಾ, ಯು.ಕೆ., ಯು.ಎಸ್, ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ಜರ್ಮನಿ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿವೆ.‌ 12 ಸಾವಿರಕ್ಕೂ ಹೆಚ್ಚು ವೀಕ್ಷಕರು, 3000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ರು.

ABOUT THE AUTHOR

...view details