ಕರ್ನಾಟಕ

karnataka

ETV Bharat / state

ಟಿಕ್ ಟಿಕ್.. ಬರುತಿದೆ ಕಾಲ,, ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ.. ಹಾಡಿನ 'ರೂಪ'ಒಂದು.. ಅರ್ಥ ಮತ್ತೊಂದು!! - IPS officer Roopa reacted from song

ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಅಧಿಕಾರಿ.. ಗೌರವ ನಿನಗಿಲ್ಲ ಎಂದು ಹಾಡುವ ಮೂಲಕ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ, ಹಾಡು ಮುಗಿದ ಬಳಿಕ ಅರ್ಥವಾಗುವವರಿಗೆ ಅರ್ಥ ಆಗುತ್ತೆ ಎಂದು ವ್ಯಂಗ್ಯ..

ಐಪಿಸ್ ಅಧಿಕಾರಿ ಡಿ.ರೂಪಾ
IPS officer Roopa

By

Published : Dec 27, 2020, 10:31 AM IST

Updated : Dec 27, 2020, 10:50 AM IST

ಬೆಂಗಳೂರು :ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ ವಿಚಾರ ಸಂಬಂಧ ಐಪಿಎಸ್ ಅಧಿಕಾರಿಗಳ ಶೀತಲ‌ ಸಮರ ನಡುವೆ ಹಾಡಿನ ಮೂಲಕವೇ ಎದುರಾಳಿಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಟಾಂಗ್ ಕೊಟ್ಟಿದ್ದಾರೆ.

ಟೌನ್​​ಹಾಲ್​ನಲ್ಲಿ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮ ನಡೆಯಿತು. ಈ ವೇಳೆ ಡಿ.ರೂಪಾ ಅವರು ಟಿಕ್..ಟಿಕ್..ಬರುತಿದೆ ಕಾಲ.. ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಅಧಿಕಾರಿ.. ಗೌರವ ನಿನಗಿಲ್ಲ ಎಂದು ಹಾಡುವ ಮೂಲಕ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ, ಹಾಡು ಮುಗಿದ ಬಳಿಕ ಅರ್ಥವಾಗುವವರಿಗೆ ಅರ್ಥ ಆಗುತ್ತೆ ಎಂದು ವ್ಯಂಗ್ಯವಾಡಿದರು.

ಹಾಡಿನ ಮೂಲಕ ಟಾಂಗ್​ ಕೊಟ್ಟ ಐಪಿಎಸ್ ಅಧಿಕಾರಿ ರೂಪಾ

ಓದಿ: ಸೇಫ್ ಸಿಟಿ ಯೋಜನೆ ಟೆಂಡರ್ ಲೋಪ; ಡಿ.ರೂಪಾಗೆ ಸ್ಪಷ್ಟೀಕರಣ ಕೋರಿ ಗೃಹ ಇಲಾಖೆ ಎಸಿಎಸ್ ಪತ್ರ

ಮತ್ತೊಂದೆಡೆ ಸೇಫ್ ಸಿಟಿ ಪ್ರಾಜೆಕ್ಟ್​​ಗೆ ಸಂಬಂಧಿದಂತೆ ಉತ್ತರ ನೀಡಲು ಹೇಮಂತ್ ನಿಂಬಾಳ್ಕರ್ ಅವರು ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ಡಿ. ರೂಪಾ ಅವರಿಗೆ ಮತ್ತೆ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಕೌಂಟರ್ ಆಗಿ ಟಾಂಗ್ ಕೊಡುತ್ತಾರೋ ಇಲ್ವೋ ಅನ್ನೋ ಪ್ರಶ್ನೆ ಎದ್ದಿದೆ.

Last Updated : Dec 27, 2020, 10:50 AM IST

ABOUT THE AUTHOR

...view details