ಬೆಂಗಳೂರು: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಜು ಅಲಿಯಾಸ್ ರಾಜುದೊರೈನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ರೌಡಿಶೀಟರ್ ರಾಜು ಅಲಿಯಾಸ್ ರಾಜುದೊರೈ ಬಂಧನ - ಬೈಯಪ್ಪನಹಳ್ಳಿ ಪೊಲೀಸ್ ಠಾಣೆ
ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ರೌಡಿಶೀಟರ್ ರಾಜು ಅಲಿಯಾಸ್ ರಾಜುದೊರೈನನ್ನು ಬಂಧಿಸಿದ್ದಾರೆ.
![ಬೆಂಗಳೂರು: ರೌಡಿಶೀಟರ್ ರಾಜು ಅಲಿಯಾಸ್ ರಾಜುದೊರೈ ಬಂಧನ Rajudurai arrested](https://etvbharatimages.akamaized.net/etvbharat/prod-images/768-512-10992133-thumbnail-3x2-vis.jpg)
ರಾಜುದೊರೈ ಬಂಧನ
ಬೈರಪ್ಪ ಗಾರ್ಡನ್ ಹಳೇ ಬೈಯಪ್ಪನಹಳ್ಳಿಯ ರಾಜು ವಿರುದ್ಧ ಈಗಾಗಲೇ 17 ಪ್ರಕರಣಗಳು ದಾಖಲಾಗಿದ್ದವು. 2016ರಿಂದಲೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ಈತ ತೊಡಗಿಕೊಂಡಿದ್ದ. ರೌಡಿಗಳ ಪಟ್ಟಿ ತೆರೆದು ಈತನ ಚಲನವಲನ ಮೇಲೆ ಪಲೀಸರು ಕಣ್ಣಿಟ್ಟಿದ್ದರು.
ಜಾಮೀನಿನ ಮೇಲೆ ಹೊರ ಬಂದು ನಿರುದ್ಯೋಗಿ ಯುವಕರ ಗುಂಪು ಕಟ್ಟಿಕೊಂಡು ರೌಡಿ ಚಟುವಟಿಕೆ ಮುಂದುವರೆಸಿದ್ದ. ಈ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಆರೋಪಿಯನ್ನ ಬಂಧಿಸಲಾಗಿದೆ.