ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಹೇಮಂತ್ ನಿಂಬಾಳ್ಕರ್, ಚಂದ್ರಶೇಖರ್, ಸೌಮೇಂದ್ರ ಮುಖರ್ಜಿ ತಂಡ ಪ್ರಕರಣದ ಪ್ರಮುಖ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಬೆಂಗಳೂರು ಗಲಭೆ: ತನಿಖಾಧಿಕಾರಿಗಳಿಂದ ಸಾಕ್ಷಿಗಳ ವಿಚಾರಣೆ ಚುರುಕು
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚರುಕು ಪಡೆದಿದ್ದು,ಘಟನೆ ನಡೆದ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಗಳೂರು ಗಲಭೆ
ಇಲ್ಲಿಯವರೆಗೆ ಒಟ್ಟು 200ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಕೆಲ ಪೆಟ್ರೋಲ್ ರೀತಿಯ ಉಂಡೆ, ಸಿಲಿಂಡರ್ ಇಟ್ಟು ಸ್ಫೋಟಿಸಲಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ಕೆಲವರು ಹೇಳಿದ್ದಾರೆ.
500ಕ್ಕೂ ಹೆಚ್ಚು ಮಂದಿ ಅಟ್ಯಾಕ್ ಮಾಡುವಾಗ ಸ್ಥಳೀಯರು, ವ್ಯಾಪಾರಿಗಳು, ಮಾಧ್ಯಮದವರು ಸಾಕ್ಷಿಯಾಗಿದ್ದರು. ಹೀಗಾಗಿ ಪೊಲೀಸರು ಸಾಕ್ಷಿಗಳ ವಿಚಾರಣೆಯಲ್ಲೂ ಕೂಡ ತೊಡಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.