ಕರ್ನಾಟಕ

karnataka

ETV Bharat / state

ನವೀನ್ ವಿರುದ್ಧ ದೂರು ನೀಡಿದವರ ಬೈಕ್ ಕೂಡ ಭಸ್ಮ! - ಡಿ.ಜೆ ಹಳ್ಳಿ ಠಾಣೆ

ಫೇಸ್​ಬುಕ್​ನಲ್ಲಿ ನವೀನ್ ಹಾಕಿದ ಅವಹೇಳನಕಾರಿ ಫೋಸ್ಟ್ ವಿಚಾರವಾಗಿ ನವೀನ್ ವಿರುದ್ದ ಫಿರ್ದೋಶ್ ಪಾಷಾ ಎಂಬುವವರು ದೂರು ನೀಡಿದ್ದು, ಗಲಭೆಯಲ್ಲಿ ಫಿರ್ದೋಶ್ ಪಾಷಾ‌‌ ಬೈಕ್​ಗೆ ಕೂಡ ಆರೋಪಿಗಳು‌‌ ಬೆಂಕಿ ಹಚ್ಚಿದ್ದರು.

bangalore-riot-update
bangalore-riot-update

By

Published : Aug 17, 2020, 12:16 PM IST

ಬೆಂಗಳೂರು:ಡಿ.ಜೆ ಹಳ್ಳಿ ,ಕೆ.ಜಿ ‌ಹಳ್ಳಿ ಗಲಾಟೆ ಪ್ರೀ ಪ್ಲಾನ್ಡ್ ಎಂಬುದಕ್ಕೆ ಮತ್ತೊಂದು ಪುರಾವೆ‌ ಪೊಲೀಸರಿಗೆ ಸಿಕ್ಕಿದ್ದು, ಸದ್ಯ ಘಟನೆ ಸಂಬಂಧಿಸಿದಂತೆ ಎಫ್​ಐಆರ್‌ ದಾಖಲಾಗಿದೆ. ಫೇಸ್​ಬುಕ್​ನಲ್ಲಿ ನವೀನ್ ಹಾಕಿದ ಅವಹೇಳನಕಾರಿ ಫೋಸ್ಟ್ ವಿಚಾರವಾಗಿ ನವೀನ್ ವಿರುದ್ಧ ಫಿರ್ದೋಶ್ ಪಾಷಾ ಎಂಬುವವರು ದೂರು ನೀಡಿದ್ದರು. ಆದರೆ, ಗಲಭೆಯಲ್ಲಿ ಫಿರ್ದೋಶ್ ಪಾಷಾ‌‌ ಬೈಕ್​ಗೆ ಕೂಡ ಆರೋಪಿಗಳು‌‌ ಬೆಂಕಿ ಹಚ್ಚಿದ್ದರು.

ದೂರಿನ ಪ್ರತಿ
ದೂರಿನ ಪ್ರತಿ

ಸದ್ಯ ಗಲಾಟೆ ಮಾಡಲು ಬಂದವರು ನನ್ನ ಬೈಕ್​​ ಸಹ ಸುಟ್ಟು ಹಾಕಿದ್ದಾರೆ ಎಂದು ಡಿ.ಜೆ ಹಳ್ಳಿ ಠಾಣೆಯಲ್ಲಿ ಅವರು ದೂರು ಕೊಟ್ಟಿದ್ದಾರೆ. ಹಾಗಾದರೆ ದೂರು ಕೊಟ್ಟವರಿಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ಗಲಾಟೆಯಲ್ಲಿ ನನ್ನ ಬೈಕ್ ಸುಟ್ಟು ಹಾಕಿದ್ದಾರೆಂದು ಗಲಭೆಕೋರರ ಮೇಲೆ ದೂರು ನೀಡಿದ್ರ ಹಿಂದೆ ಯಾರಿದ್ದಾರೆ? ಅವಹೇಳನಕಾರಿ ಪೋಸ್ಟ್ ವಿಚಾರ ಗಲಾಟೆಗೆ ನೆಪ‌ ಮಾತ್ರವೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಫಿರ್ದೋಷ್ ಪಾಷಾ ದೂರು ಆಧರಿಸಿ ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ.

ABOUT THE AUTHOR

...view details