ಬೆಂಗಳೂರು: ಡಿ.ಜೆ ಹಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು 8 ಜನ ಆರೋಪಿಗಳನ್ನ ಪೊಲೀಸರು ತನಿಖೆ ನಡೆಸಿ, ಮೆಡಿಕಲ್ ಚೆಕ್ಅಪ್ ನಡೆಸಲು ಕರೆದೊಯ್ದಿದ್ದಾರೆ. ಚೆಕ್ಅಪ್ ನಡೆಸಿದ ಬಳಿಕ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆರೋಪಿಗಳನ್ನು ಹಾಜರುಪಡಿಸಿ, ಹೆಚ್ಚಿನ ತನಿಖೆ ಅವಶ್ಯಕತೆ ಇದ್ದರೆ ವಶಕ್ಕೆ ಪಡೆಯಲಿದ್ದಾರೆ.
ಬೆಂಗಳೂರು ಗಲಭೆ ಪ್ರಕರಣ: ಆರೋಪಿ ಪತಿಯನ್ನು ಕಂಡು ಕುಸಿದು ಬಿದ್ದ ಪತ್ನಿ! - ಆರೋಪಿ ಪತಿಯನ್ನು ಕಂಡು ಕುಸಿದು ಬಿದ್ದ ಹೆಂಡತಿ
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಗಂಡನನ್ನು ನೋಡಿ, ಆರೋಪಿಯ ಪತ್ನಿಯು ಕುಸಿದು ಬಿದ್ದ ಘಟನೆ ನಡೆಯಿತು.
ಆರೋಪಿ ಪತಿಯನ್ನು ಕಂಡು ಕುಸಿದು ಬಿದ್ದ ಹೆಂಡತಿ
ಸದ್ಯ ಪೊಲೀಸರು ಬಿಎಂಟಿಸಿ ಬಸ್ನಲ್ಲಿ ಆರೋಪಿಗಳನ್ನ ಕರೆದೊಯ್ದಿದ್ದು, ಈ ವೇಳೆ ತಮ್ಮ ಮಕ್ಕಳು ಹಾಗೂ ಗಂಡಂದಿರನ್ನ ನೋಡಿ ಅವರ ಮನೆಯವರು ಕೈಮುಗಿದು ಕಣ್ಣೀರು ಹಾಕಿದರು.
ಈ ವೇಳೆ ಪತಿಯು ಪೊಲೀಸರ ವಶದಲ್ಲಿರುವುದನ್ನು ನೋಡಿದ ಆರೋಪಿಯ ಪತ್ನಿಯೊಬ್ಬರು ಕುಸಿದು ಬಿದ್ದ ಘಟನೆ ಕೂಡ ನಡೆಯಿತು. ಕೂಡಲೇ ಆ ಮಹಿಳೆಗೆ ಸ್ಥಳದಲ್ಲಿದ್ದ ಜನರು ನೀರು ಕುಡಿಸಿ ಆರೈಕೆ ಮಾಡಿದರು.