ಬೆಂಗಳೂರು:ಬಾಂಗ್ಲಾದೇಶ ಮೂಲದ ಯುವತಿಗೆ ಆಕೆಯ ಸ್ನೇಹಿತರೇ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳ ಬಂಧನ ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ.
ರಾಮಮೂರ್ತಿ ನಗರ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಗಳಾದ ಮೊಹಮ್ಮದ್, ಹಕ್ಕಿಮ್ ಸಾಗರ್, ರಹೀಮ್, ಓರ್ವ ಮಹಿಳೆ ಸೇರಿದಂತೆ ಐವರ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ಫುಲ್ ಡ್ರಿಲ್
ಇದರ ಜತೆಗೆ ಇವರಿಗೆ ಪರಿಚಯವಿರುವವರನ್ನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಈಗಾಗಲೇ ಪೊಲೀಸರು ಎಫ್ಎಸ್ಎಲ್ ತಂಡ ಕರೆಯಿಸಿ ಎನ್ಐಐ ಕಾಲೋನಿಯಲ್ಲಿ ವಾಸವಾಗಿದ್ದ ಇವರ ಮನೆ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲಿದ್ದ ಕೆಲ ವಸ್ತುಗಳಾದ ಹಾಸಿಗೆ, ದಿಂಬು, ಮದ್ಯದ ಬಾಟೆಲ್ ಸೇರಿದಂತೆ ಸುಮಾರು 16 ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ವಿಚಾರಣೆ ಕೈಗೊಂಡ ಪೊಲೀಸ್ ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿಗೆ ಸ್ನೇಹಿತರಿಂದಲೇ ಲೈಂಗಿಕ ಕಿರುಕುಳ.. ವಿಡಿಯೋ ಮಾಡಿ ವಿಕೃತಿ ಮೆರೆದವರು ಅರೆಸ್ಟ್
ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ಪ್ರದೀಪ್ ಎಂಬುವರರ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿಗಳು ಸುಬ್ರಮಣ್ಯನಗರದ ಆಧಾರ್ ಕಾರ್ಡ್ ತೋರಿಸಿ ಮನೆ ಬಾಡಿಗೆ ಪಡೆದುಕೊಂಡಿದ್ದರು. ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು. ಯುವತಿ ಮೇಲೆ ಆತ್ಯಾಚಾರ ಮಾಡಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಮನೆ ಮಾಲೀಕ ಪ್ರದೀಪ್ ತಿಳಿಸಿದ್ದಾರೆ.
ಡಿಸಿಪಿ ಶರಣಪ್ಪ ಮಾಹಿತಿ
ಇದಕ್ಕೆ ಸಂಬಂಧಿಸಿದಂತೆ ಪೂರ್ವ ವಲಯದ ಡಿಸಿಪಿ ಶರಣಪ್ಪ ಮಾತನಾಡಿ, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಆಧಾರದ ಮೇಲೆ ನಮ್ಮ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇವತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಐದು ಜನ ಆರೋಪಿಗಳನ್ನು ನಮ್ಮ ಕಸ್ಟಡಿಗೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ವಿಡಿಯೋದಲ್ಲಿರುವ ಮಹಿಳೆ ಮತ್ತು ಆರೋಪಿಗಳು ಎಲ್ಲರೂ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ. ಮತ್ತು ಅವರ ನಡುವೆ ಯಾವುದೋ ಒಂದು ವಿಚಾರಕ್ಕೆ ಜಗಳ ಬಂದಿದ್ದು, ಹೆಚ್ಚಿನ ತನಿಖೆಯನ್ನು ಮಾಡಬೇಕಾಗಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಪಿಸಿ ರೇಪ್ ಮತ್ತು ಐಟಿ ಆ್ಯಕ್ಟ್ ಮತ್ತು ಅಕ್ರಮವಾಗಿ ಭಾರತಕ್ಕೆ ಬಂದಿರುವ ಸಲುವಾಗಿ ಫಾರಿನರ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.