ಬೆಂಗಳೂರು: ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದಿರುವ ಕನ್ನಡಿಗರನ್ನು ಸರ್ಕಾರ ನಗರದಲ್ಲಿನ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಿಸಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಹೋಟೆಲ್ ವ್ಯವಸ್ಥೆ ಬಗ್ಗೆ ಕ್ವಾರಂಟೈನಿಗರ ಅಸಮಾಧಾನ: ಸರ್ಕಾರದ ವಿರುದ್ಧ ಆಕ್ರೋಶ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಲಾಕ್ಡೌನ್ ಸಂಬಂಧ ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರನ್ನು ನಗರಕ್ಕೆ ವಿಮಾನಗಳ ಮೂಲಕ ಕರೆ ತರಲಾಗಿದ್ದು, ಅವರೆಲ್ಲರೂ ಸರ್ಕಾರ ನಿಗದಿ ಮಾಡಿರುವ ಹೋಟೆಲ್ಗಳಲ್ಲಿ ಕ್ವಾರಂಟೈನ್ಲ್ಲಿದ್ದಾರೆ. ಇವರೆಲ್ಲ ತಮ್ಮ ತಮ್ಮ ಸ್ವಂತ ಹಣ ನೀಡಿ ಹೋಟೆಲ್ಗಳಲ್ಲಿ ತಂಗಿದ್ದಾರೆ. ಆದರೆ, ಅಲ್ಲಿನ ಆಡಳಿತ, ವ್ಯವಸ್ಥೆ ನೀಡದೇ ಅಸಡ್ಡೆ ತೋರುತ್ತಿದೆ. ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಲಾಕ್ಡೌನ್ ಸಂಬಂಧ ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರನ್ನು ನಗರಕ್ಕೆ ವಿಮಾನಗಳ ಮೂಲಕ ಕರೆ ತರಲಾಗಿದ್ದು, ಅವರೆಲ್ಲರೂ ಸರ್ಕಾರ ನಿಗದಿ ಮಾಡಿರುವ ಹೋಟೆಲ್ಗಳಲ್ಲಿ ಕ್ವಾರಂಟೈನ್ಲ್ಲಿದ್ದಾರೆ. ಇವರೆಲ್ಲ ತಮ್ಮ ತಮ್ಮ ಸ್ವಂತ ಹಣ ನೀಡಿ ಹೋಟೆಲ್ಗಳಲ್ಲಿ ತಂಗಿದ್ದಾರೆ. ಆದರೆ, ಅಲ್ಲಿನ ಆಡಳಿತ ವ್ಯವಸ್ಥೆ ನೀಡದೇ ಅಸಡ್ಡೆ ತೋರುತ್ತಿದ್ದಾರೆ. ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ರಾಜಾಜಿನಗರದ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿರುವ ಕನ್ನಡತಿ ಪವಿತ್ರ ಜಯಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನಿಗದಿ ಮಾಡಿರುವ ಹೋಟೆಲ್ಗಳಲ್ಲಿ ನಾವು ಹಣ ನೀಡಿ ತಂಗಿದ್ದೇವೆ. ಇಲ್ಲಿ ನಮಗೆ ಸರಿಯಾದ ಟ್ರೀಟ್ಮೆಂಟ್ ಸಿಗುತ್ತಿಲ್ಲ. ವೆಜ್ ಊಟ ಆರ್ಡರ್ ಮಾಡಿದ್ರೆ ನಾಬ್ ವೆಜ್ ಊಟ ಕೊಡುತ್ತಾರೆ. ನಾವಿರುವ ರೂಮ್ಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ. ಇಲ್ಲಿ ಸ್ಯಾನಿಟೈಸರ್ ಕೂಡ ಇಟ್ಟಿಲ್ಲ. ಸರ್ಕಾರ ಕಡಿಮೆ ದರ ನಿಗದಿ ಮಾಡಿದೆ ಎಂದು ಬೇಕಾ ಬಿಟ್ಟಿಯಾಗಿ ಹೋಟೆಲ್ ಸಿಬ್ಬಂದಿ ಬೇಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಕೋಪದಿಂದ ವಿಡಿಯೋ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.