ಬೆಂಗಳೂರು: ಕೋವಿಡ್ ಆರ್ಭಟ, ಸಾವು ನೋವಿನ ನಡುವೆಯೂ ಖಾಸಗಿ ಆಸ್ಪತ್ರೆಗಳಲ್ಲಿ ಅಮಾನವೀಯ ಘಟನೆ, ಹಣದ ಲೂಟಿ, ಕಳ್ಳತನದಂತಹ ಪ್ರಕರಣಗಳು ನಡೆಯುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಖಾಸಗಿ ಆಸ್ಪತ್ರೆ ಸಿಬ್ಬಂದಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಆಭರಣದ ಬದಲಿಗೆ ನಕಲಿ ಆಭರಣ ನೀಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೃತಳ ಚಿನ್ನಾಭರಣ ಎಗರಿಸಿದ ಆರೋಪ: ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ FIR! - bangalore gold theft case
ಭಾಗ್ಯಮ್ಮ ಎಂಬುವವರು ಮೇ 18ರಂದು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ 25 ರಂದು ಮೃತಪಟ್ಟಿದ್ದಾರೆ. ಆಕೆ ಬಳಿಯಿದ್ದ ಚಿನ್ನಾಭರಣ ಕಳವಾಗಿದ್ದು, ಆಸ್ಪತ್ರೆ ಸಿಬ್ಬಂದಿಯೇ ಚಿನ್ನ ಎಗರಿಸಿದ್ದಾರೆಂದು ಮೃತ ಭಾಗ್ಯಮ್ಮನ ಪತಿ ಕೃಷ್ಣಪ್ಪ ದೂರು ನೀಡಿದ್ದಾರೆ.
1.3 ಲಕ್ಷ ರೂ. ಮೌಲ್ಯದ 38 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆಂದು ಯಲಹಂಕದಲ್ಲಿರುವ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪಿಸಲಾಗಿದೆ. ಭಾಗ್ಯಮ್ಮ ಎಂಬುವವರು ಮೇ 18 ರಂದು ಚಿಕಿತ್ಸೆಗೆ ದಾಖಲಾಗಿದ್ದಾಗ ಆಸ್ಪತ್ರೆ ಸಿಬ್ಬಂದಿ ಅಭರಣವನ್ನು ಎಗರಿಸಿದ್ದಾರೆನ್ನುವ ಆರೋಪವಿದೆ. ಮೇ 25 ರಂದು ಚಿಕಿತ್ಸೆ ಫಲಕಾರಿಯಾಗದೇ ಭಾಗ್ಯಮ್ಮ ಮೃತಪಟ್ಟಿದ್ದರು. ಈ ಸಂಬಂಧ ಮೃತ ಭಾಗ್ಯಮ್ಮನ ಪತಿ ಕೃಷ್ಣಪ್ಪ ದೂರು ನೀಡಿದ್ದು, ಇದೀಗ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಶಿವಮೊಗ್ಗ: ಹಣಕ್ಕಾಗಿ ವೃದ್ದೆಯ ಕತ್ತು ಹಿಸುಕಿ ಕೊಂದ ಮಹಾಪಾಪಿಗಳು