ಬೆಂಗಳೂರು:ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ತುರ್ತು ಸೇವೆಗೆ ಪರಿಹಾರ ಸಾಮಗ್ರಿ ಸಂಗ್ರಹಿಸಲು ಚಿಕ್ಕಜಾಲ ಪೊಲೀಸರು ಮುಂದಾಗಿದ್ದಾರೆ.
ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಸಿಲಿಕಾನ್ ಸಿಟಿ ಪೊಲೀಸರು!
ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ತುರ್ತು ಸೇವೆಗೆ ಪರಿಹಾರ ಸಾಮಗ್ರಿ ಸಂಗ್ರಹಿಸಲು ಚಿಕ್ಕಜಾಲ ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಚಿಕ್ಕಜಾಲಾ ಪೊಲೀಸ್ ಠಾಣೆಗೆ ತಲುಪಿಸಿದರೆ ಅಲ್ಲಿಂದ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ.
ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಸಾಮಗ್ರಿಗಳು, ದಿನ ಬಳಕೆ ವಸ್ತುಗಳನ್ನು ಪೂರೈಸಲು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಸಂಗ್ರಹಣೆ ಮಾಡುತ್ತಿದ್ದು, ಅ.11 ರಿಂದ 18ರವರೆಗೆ ಸಾರ್ವಜನಿಕರು ತಮಗೆ ಅನುಕೂಲವಾದ ಹಾಸಿಗೆ, ಹೊದಿಕೆ, ಉಡುಪುಗಳು, ಸ್ಯಾನಿಟರಿ ಪ್ಯಾಡ್, ಪ್ಲಾಸ್ಟಿಕ್ ತಾಡಪತ್ರಿ, ಟವಲ್, ಸೀರೆ, ಪ್ಯಾಂಟ್, ಶರ್ಟ್, ಮಕ್ಕಳ ಉಡುಪು, ಅಕ್ಕಿ, ಬೇಳೆ, ಬಿಸ್ಕತ್ತು ಹಾಗೂ ಇತರೆ ಆಹಾರ ಪದಾರ್ಥಗಳನ್ನು ತಲುಪಿಸಬಹುದು.
ಆದರೆ, ಯಾವುದೇ ರೀತಿಯಾಗಿ ಹಣ ಸಂಗ್ರಹ ಮಾಡುವುದಿಲ್ಲ. ಮಾಹಿತಿಗೆ ಇನ್‌ಸ್ಪೆಕ್ಟರ್ ಮುತ್ತುರಾಜ್ ಅವರ ಮೊ.ಸಂ.9480801419 ಹಾಗೂ ಅಣ್ಣಪ್ಪ ಕಾಗವಾಡ ಮೊ.ಸಂ.9535841668ಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.