ಬೆಂಗಳೂರು :ನಡುರಸ್ತೆಯಲ್ಲಿ ಪಂಚ್ಚರ್ ಆಗಿ ನಿಂತಿದ್ದ ಆ್ಯಂಬುಲೆನ್ಸ್‌ಗೆ ಮೆಕ್ಯಾನಿಕ್ ಎಂಬಂತೆ ವಾಹನ ಟೈರ್ ಬದಲಿಸಿ ಆಸ್ಪತ್ರೆಗೆ ಹೋಗಲು ಅನುವು ಮಾಡಿಕೊಟ್ಟಿದ್ದ ಕಬ್ಬನ್‌ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕಾಸಪ್ಪ ಕಲ್ಲೂರುಗೆ ಸಾರ್ವಜನಿಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಾನ್ಸ್ಟೇಬಲ್ನ ಸಮಯಪ್ರಜ್ಞೆಯಿಂದ ರೋಗಿಯ ಜೀವ ಉಳಿಸಲು ನೆರವಾಗಿದ್ದರು. ಈ ಕಾರ್ಯವನ್ನ ಮೆಚ್ಚಿ ಕಾನ್‌ಸ್ಟೇಬಲ್ ಕಾಸಪ್ಪ ಕಲ್ಲೂರು ಅವರಿಗೆ ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ.ಬಿ ಆರ್ ರವಿಕಾಂತೇಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೂ 5 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.