ಕರ್ನಾಟಕ

karnataka

ETV Bharat / state

ಸತತ 2ನೇ ಬಾರಿ ಬೆಂಗಳೂರು ನಗರ ಪೊಲೀಸ್​​ ಆಯುಕ್ತರ​ ಕಚೇರಿ ಸೀಲ್ ​​ಡೌನ್​​​​

ನಗರ ಪೊಲೀಸ್ ಆಯ್ತುಕ್ತರ ಕಚೇರಿಯನ್ನು ವಾರದ ಹಿಂದೆ ಸೀಲ್ ​​​​ಡೌನ್​ ಮಾಡಲಾಗಿತ್ತು. ಇದೀಗ ಮತ್ತೆ ಸೀಲ್​​ ಡೌನ್​ ಮಾಡಲು ನಿರ್ಧರಿಸಲಾಗಿದೆ. ಅಲ್ಲಿನ ಪೊಲೀಸ್​ ಸಿಬ್ಬಂದಿಗೆ ಮತ್ತೆ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ.

Bangalore Police commissioner office sealed down second time for corona outbreak
ಪೊಲೀಸರಿಗೂ ಕೊರೊನಾ ಕಂಟಕ...ಸತತ 2ನೇ ಬಾರಿ ಕಮಿಷನರ್​ ಕಚೇರಿ ಸೀಲ್​​​ಡೌನ್​​​​

By

Published : Jul 10, 2020, 6:46 PM IST

ಬೆಂಗಳೂರು: ಇನ್‌ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಅಂಟಿದ ಹಿನ್ನೆಲೆಯಲ್ಲಿ 2ನೇ ಬಾರಿಗೆ ಆಯುಕ್ತರ ಕಚೇರಿಯನ್ನು ಸೀಲ್​​​​ ಡೌನ್ ಮಾಡಲಾಗಿದೆ.

10 ದಿನಗಳ ಹಿಂದೆ ಸಿಬ್ಬಂದಿಗೆ ಸೋಂಕು ಕಂಡು ಬಂದಿದ್ದರಿಂದ ಮೂರು ದಿನಗಳ ಕಾಲ ಸೀಲ್​​​​ ಡೌನ್ ಮಾಡಲಾಗಿತ್ತು. ಇದಾದ ಬಳಿಕ ಮುಂಜಾಗ್ರತಾ ಕ್ರಮವಾಗಿ ಮತ್ತೆ ಕಚೇರಿ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ 10ಕ್ಕಿಂತ ಹೆಚ್ಚು ಪೊಲೀಸರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಪೊಲೀಸ್​​ ಆಯುಕ್ತರ ಕಚೇರಿ ಸೀಲ್​ ಡೌನ್ ಕುರಿತ ಆದೇಶ ಪತ್ರ

ಸೋಂಕಿತರೆಲ್ಲರನ್ನೂ ಕ್ವಾರಂಟೈನ್​​​ಗೆ‌‌ ಒಳಪಡಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ಇಂದಿನಿಂದ ಜುಲೈ 14ರವರೆಗೆ ಕಚೇರಿ ಸೀಲ್ ​​​​ಡೌನ್ ಮಾಡಲಾಗಿದೆ.

ಈ ಅವಧಿಯಲ್ಲಿ ಕಂಟ್ರೋಲ್ ರೂಮ್ ಹಾಗೂ ಕಮಾಂಡ್ ಸೆಂಟರ್​​​ನಲ್ಲಿ ನಿಯಮಿತ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು‌ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ‌.

ABOUT THE AUTHOR

...view details