ಬೆಂಗಳೂರು:ನಗರದ ದಕ್ಷಿಣ ವಿಭಾಗದಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಹಾಗೂ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಭಯ ಹೋಗಲಾಡಿಸಲು ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ.
ಭಯಪಡಬೇಡಿ, ತೊಂದರೆಗೆ ಸಿಲುಕಿದ್ರೆ ಇಷ್ಟೇ ಮಾಡಿ.. ಸಿಲಿಕಾನ್ ಸಿಟಿ ಪೊಲೀಸರು ಜನಸ್ನೇಹಿ.. - ಬೆಂಗಳೂರು ಬನಶಂಕರಿ ಪೊಲೀಸ್ ಕರಪತ್ರ ಸುದ್ದಿ
ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು, ಪೊಲೀಸರ ಠಾಣಾ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಇರುವ ಕರಪತ್ರಗಳನ್ನು ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಬಸ್ ನಿಲ್ದಾಣ ಸೇರಿ ಪಬ್ಲಿಕ್ ಜಾಗಗಳಲ್ಲಿ ಅಂಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ದಕ್ಷಿಣ ವಲಯದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ನಿಯಂತ್ರಿಸಲು ಹಾಗೂ ಪೊಲೀಸರ ಇರುವಿಕೆ ಬಗ್ಗೆ ಗುರುತು ಮೂಡಿಸಲು ಪ್ರಾಯೋಗಿಕವಾಗಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು, ಪೊಲೀಸರ ಠಾಣಾ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಇರುವ ಕರಪತ್ರಗಳನ್ನು ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಜಾಗಗಳಲ್ಲಿ ಅಂಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಕಳ್ಳತನ, ದರೋಡೆ, ಗಲಾಟೆ, ಇನ್ನಿತರ ಗಲಾಟೆಗಳು ನಡೆದಾಗ ತುರ್ತಾಗಿ ಪೊಲೀಸರನ್ನು ಸಂಪರ್ಕಿಸಲು ಆಯಾ ಏರಿಯಾದ ಜವಾಬ್ದಾರಿ ವಹಿಸಿಕೊಂಡಿರುವ ಬೀಟ್ ಪೊಲೀಸರಿಗೆ ಮಾಹಿತಿ ನೀಡುವ ಉದ್ದೇಶ ಇದಾಗಿದೆ. ಮುಂದಿನ ಹಂತದಲ್ಲಿ ದಕ್ಷಿಣ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಡಿಸಿಪಿ ರೋಹಿಣಿ ಕಟೋಚ್ ಸೆಪೆಟ್, ಎಲ್ಲಾ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದಾರೆ.