ಬೆಂಗಳೂರು:ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಿದ್ದನಾಗಿದ್ದ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಲಿಕಾನ್‌ಸಿಟಿಯಲ್ಲಿ ಶಂಕಿತ ಉಗ್ರ ಸಿಸಿಬಿ ತೆಕ್ಕೆಗೆ: ತನಿಖೆ ಚುರುಕು - ಸಲೀಂ ಅಹಮದ್ ಬಂಧಿತ ಶಂಕಿತ ಉಗ್ರ
ಸಲೀಂ ಅಹ್ಮದ್ ಬಂಧಿತ. ಈ ಮೊದಲೇ ಮೆಹಬೂಬ್ ಪಾಷಾ ಎಂಬ ಇನ್ನೊಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಮೆಹಬೂಬ್ ಪಾಷಾನ ಮಾಹಿತಿ ಮೇರೆಗೆ ಸಲೀಂ ಅಹ್ಮದ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸಲೀಂ ಅಹ್ಮದ್ ಬಂಧಿತ. ಈ ಮೊದಲೇ ಮೆಹಬೂಬ್ ಪಾಷಾ ಎಂಬ ಇನ್ನೊಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಮೆಹಬೂಬ್ ಪಾಷಾನ ಮಾಹಿತಿ ಮೇರೆಗೆ ಸಲೀಂ ಅಹ್ಮದ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸಲೀಂ ಪ್ರಮುಖ ಆರೋಪಿ ಮೆಹಬೂಬು ಪಾಷಾ ಜೊತೆಗೂಡಿ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಹಾಗೂ ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ಸೇರಿ ವಿಧ್ವಂಸಕ ಕೃತ್ಯವೆಸಗಲು ಫ್ಲಾನ್ ಮಾಡಿದ್ದ ಎನ್ನಲಾಗಿದೆ.ಸದ್ಯ ಬಹುದೊಡ್ಡ ದುರಂತವನ್ನ ತಪ್ಪಿಸಿದ ಸಿಸಿಬಿ, ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಜೊತೆ ಸಲೀಂನ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಸಿಸಿಬಿ ವಶದಲ್ಲಿರುವ ಆರೋಪಿಗಳನ್ನು ಎನ್ಐಎ ಕೂಡ ಶೀಘ್ರದಲ್ಲಿ ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.