ಕರ್ನಾಟಕ

karnataka

ETV Bharat / state

ಅಂದರ್ ಬಾಹರ್ ಜೂಜಾಟಕ್ಕೆ ಸಾಫ್ಟವೇರ್ ಬಳಕೆ: ಜುಜೂಕೋರರಿಗೆ ಡಿವೈಸ್ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

ಅಂದರ್ ಬಾಹರ್ ಜುಜೂಕೋರರಿಗೆ ಆತ್ಯಾಧುನಿಕ ಡಿವೈಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

Bangalore Police arrested accused who have  selling device to gamblers
ಜುಜೂಕೋರರಿಗೆ ಡಿವೈಸ್ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

By

Published : Feb 18, 2022, 10:44 PM IST

ಬೆಂಗಳೂರು:ತಂತ್ರಜ್ಞಾನ ಹೆಚ್ಚಾದಂತೆ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದೆ.‌ ಜುಜೂಕೋರರಿಗೆ ಆತ್ಯಾಧುನಿಕ ಡಿವೈಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ನಿವಾಸಿಯಾ ಪರ್ಧಿನ್ ಖಾನ್ ಬಂಧಿತ ಆರೋಪಿ. ನಗರದಲ್ಲಿ ಇಸ್ಟೀಟ್ ಆಡುವ ದಂಧೆಕೋರರಿಗೆ ಡಿವೈಸ್ ಮಾರಾಟ ಮಾಡುತ್ತಿದ್ದ. ದೆಹಲಿಯಿಂದ 25 ಸಾವಿರಕ್ಕೆ ಡಿವೈಸ್ ಖರೀದಿಸಿ 40 ಸಾವಿರಕ್ಕೆ‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ.

ಇದೇ ರೀತಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಡಿವೈಸ್ ಮಾರಾಟ ಮಾಡಿ ವಂಚಿಸಿದ್ದ. ಈ ಸಂಬಂಧ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ‌. ವಿಚಾರಣೆಯಲ್ಲಿ ಹತ್ತಾರು ಜನರಿಗೆ ಡಿವೈಸ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಯಾರಿಗೆಲ್ಲ ಮಾರಾಟ ಮಾಡಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆ್ಯಪ್ ಮೂಲಕ ಕಾರ್ಡ್ ಗಳನ್ನು ಸ್ಕ್ಯಾನ್ :ಜೂಜಾಟ ಆಡುವುದು ಕಾನೂನುಬಾಹಿರ. ಹೀಗಿದ್ದರೂ ಆರೋಪಿ ಅಂದರ್ ಬಾಹರ್ ಆಟಕ್ಕೂ ಸಾಫ್ಟ್​​​​​ವೇರ್ ಬಳಸಿಕೊಂಡಿದ್ದ. ಮೊಬೈಲ್​​​​ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದ. ಆ್ಯಪ್ ಮೂಲಕ ಕಾರ್ಡ್​​​ಗಳನ್ನು ಸ್ಕ್ಯಾನ್ ಮಾಡುತ್ತಿದ್ದ. ಯಾರು ಕಾರ್ಡ್ಸ್ ಶಫಲ್ ಮಾಡಲಿದ್ದಾರೋ ಆ ಭಾಗದಲ್ಲಿ ಮೊಬೈಲ್ ಇಟ್ಟರೆ ಪ್ರತಿ ಕಾರ್ಡ್ ಸ್ಕ್ಯಾನ್ ಆಗಲಿದೆ.

ಆಟದಲ್ಲಿ ಯಾರಿಗೆ ಶೋ ಕಾರ್ಡ್ ಬೀಳುತ್ತೆ ಅನ್ನೋದನ್ನು ಸಹ ತೋರಿಸಲಿದೆ. ಕಿವಿಯಲ್ಲಿ ವೈರ್​​​ಲೆಸ್ ಡಿವೈಸ್ ಮೂಲಕ‌ ಧ್ವನಿ ಆಲಿಸಿ ವಂಚಿಸಬಹುದಾಗಿದೆ‌‌. ಮೊಬೈಲ್ ಹಿಡಿದು ಕೂತರೆ ಅಂದರ್​​​​-ಬಾಹರ್​​​ ಅನ್ನೋದನ್ನು ವೈರ್‌ಲೆಸ್ ಸ್ಪೀಕರ್ ಹೇಳಲಿದೆ.‌ ಇಂತಹ ಆಧುನಿಕ ಡಿವೈಸ್ ಮೂಲಕ ಜುಜುಕೋರರರು ಇಸ್ಟೀಟ್ ಆಟದಲ್ಲಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಹೋರಾಟ: ಸಿಎಂಗೆ ರೈತ ಸಂಘದ ಎಚ್ಚರಿಕೆ

ABOUT THE AUTHOR

...view details