ಬೆಂಗಳೂರು:ದೇಶವ್ಯಾಪಿ ಕರೆಕೊಟ್ಟಿರುವ 21 ದಿನಗಳ ಲಾಕ್ಡೌನ್ ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸದಾ ಗಿಜಿಗುಡುತ್ತಿದ್ದ ಕೆ.ಆರ್. ಮಾರುಕಟ್ಟೆ ಖಾಲಿಖಾಲಿ ... ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ
ಸದಾ ವ್ಯಾಪಾರಿಗಳು, ಜನರಿಂದ ಕಿಕ್ಕಿರಿದಿದ್ದ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ. ಆರ್. ಮಾರುಕಟ್ಟೆ ಇಂದು ಖಾಲಿಖಾಲಿಯಾಗಿದ್ದು, ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು
ಸದಾ ಸಾವಿರಾರು ವ್ಯಾಪಾರಿಗಳು, ಗ್ರಾಹಕರ ದಂಡು ಸೇರುವ ಕೆ.ಆರ್ ಮಾರುಕಟ್ಟೆ ಸಂಪೂರ್ಣವಾಗಿ ಖಾಲಿಯಾಗಿದೆ. ಯಾರೊಬ್ಬರೂ ಕೂಡ ಇತ್ತ ಬಾರದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ಹಿಡಿದಿದ್ದಾರೆ.
ಪೊಲೀಸರು, ಪೌರಕಾರ್ಮಿಕರು ಬಿಟ್ಟರೆ ಬೇರೆ ಯಾರೂ ಓಡಾಟ ನಡೆಸುತ್ತಿಲ್ಲ. ಕೆ ಆರ್ ಮಾರ್ಕೆಟ್ ಬಳಿ ಒಂದು ಕೆಎಸ್ಆರ್ಪಿ ತುಕಡಿ, 50 ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಅನಗತ್ಯ ಓಡಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.