ಬೆಂಗಳೂರು:ಪ್ರಸ್ತುತ ಬಿಬಿಎಂಪಿಯಲ್ಲಿ ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್) ಕಾಯ್ದೆ ತೆಗೆದುಹಾಕಿ, ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ನಗರಕ್ಕೆ ಪ್ರತ್ಯೇಕವಾದ ಕಾಯ್ದೆ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಅಗತ್ಯವಿದೆ: ಸಚಿವ ಆರ್. ಅಶೋಕ್ - ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಅಗತ್ಯವಿದೆ
ಬಿಬಿಎಂಪಿಯಲ್ಲಿ ಪ್ರಸ್ತುತ ಕೆಎಂಸಿ ಕಾಯ್ದೆ ಜಾರಿಯಲ್ಲಿದ್ದು, ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ನಗರಕ್ಕೆ ಪ್ರತ್ಯೇಕವಾದ ಕಾಯ್ದೆ ಅಗತ್ಯವಿದೆ. ಈ ಕುರಿತು ಹೊಸ ಯೋಜನೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಪಾಲಿಕೆ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ನಗರಕ್ಕೆ ಕೆಎಂಸಿ ಕಾಯ್ದೆಗಿಂತ ಎತ್ತರದ ಕಾಯ್ದೆ ಬೇಕಾಗಿದೆ. ಈಗಾಗಲೇ ಈ ಕುರಿತ ಬಿಲ್ ಮಂಡನೆಯಾಗಿದ್ದು, ಸೆಲೆಕ್ಟ್ ಕಮಿಟಿಗೆ ವರ್ಗಾವಣೆಯಾಗಿದೆ. ಆ ಸಮಿತಿಯಲ್ಲಿ ಎಲ್ಲಾ ಪಕ್ಷದವರಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಪಡೆದು ಕಾಯ್ದೆ ಮಂಡಿಸಲಾಗುತ್ತದೆ ಎಂದರು.
ಈ ಕಾಯ್ದೆ ಕಸದ ಮಾಫಿಯಾ ತಡೆಗಟ್ಟಲು, ಕಾನೂನು ಉಲ್ಲಂಘಿಸುವವರಿಗೆ, ಹೆಚ್ಚು ತೆರಿಗೆ ವಿಧಿಸುವವರಿಗೆ ಅನುಕೂಲವಾಗುತ್ತದೆ. ಮುಂಬೈ, ಕೋಲ್ಕತ್ತಾ ನಗರಗಳ ಕುರಿತು ಅಧ್ಯಯನ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.