ಬೆಂಗಳೂರು :ಐದು ವರ್ಷದ ಮಗನನ್ನು ನೇಣು ಬಿಗಿದು ಸಾಯಿಸಿ ಬಳಿಕ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಂಗಳೂರು ಮೂಲದ ರೋಹಿಣಿ ಶೆಟ್ಟಿ ಹಾಗೂ ಸಿಯಾನ್ ಶೆಟ್ಟಿ ಎಂಬುವರು ಮೃತಪಟ್ಟ ತಾಯಿ-ಮಗ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಏ.17ರಂದು ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
36 ವರ್ಷದ ರೋಹಿಣಿ ಗೃಹಿಣಿಯಾಗಿದ್ದರು. ಪತಿ ಪ್ರವೀಣ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರೋಹಿಣಿ ಅವರು ಇತ್ತೀಚಿಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮದುವೆಯಾದ ಬಳಿಕವೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.