ಬೆಂಗಳೂರು: ಲಾಕ್ಡೌನ್ ವೇಳೆ ಕಳ್ಳರು ಕೈಚಳಕ ತೋರಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಲ್ಲಿ ಅರ್ಚಕರ ಮನೆ ಲಾಕ್ ಮಾಡಿ ದೇವಸ್ಥಾನದ ಹುಂಡಿ ಕದ್ದ ಖದೀಮರು - ಬೆಂಗಳೂರಿನಲ್ಲಿ ಕಳ್ಳತನ
ಕೊರೊನಾ ತಡೆಗೆ ಎಲ್ಲೆಡೆ ಲಾಕ್ಡೌನ್ ಘೋಷಣೆಯಾಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಳ್ಳರು ಮನೆ ಬಿಟ್ಟು ದೇವಸ್ಥಾನಕ್ಕೆ ಕನ್ನ ಹಾಕಿದ್ದಾರೆ. ಬೆಂಗಳೂರಲ್ಲಿ ಈ ಪ್ರಕರಣ ನಡೆದಿದೆ.
ಕೊರೊನಾ ತಡೆಗೆ ಎಲ್ಲೆಡೆ ಲಾಕ್ಡೌನ್ ಘೋಷಣೆಯಾಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಟ್ಟುಕೊಂಡ ಸಮಯಸಾಧಕರು ಮನೆ ಬಿಟ್ಟು ದೇವಸ್ಥಾನಕ್ಕೆ ಕನ್ನ ಹಾಕಿದ್ದಾರೆ. ಹೆಗಡೆನಗರ ಎರಡನೇ ಕ್ರಾಸ್ನ ನಾಗಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಬಾಗಿಲಿನ ಬೀಗ ಒಡೆದು ದೇವರ ಹುಂಡಿ ಕದ್ದಿದ್ದಾರೆ.
ಅಷ್ಟು ಮಾತ್ರವಲ್ಲದೇ ಪಕ್ಕದಲ್ಲಿದ್ದ ಅರ್ಚಕರ ಮನೆಗೆ ಹೊರಗಿನಿಂದ ಲಾಕ್ ಮಾಡಿ ಈ ಕೃತ್ಯವೆಸಗಿದ್ದಾರೆ. ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರಿಂದಲೇ ಕೃತ್ಯವೆಸಗಿದ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.