ಬೆಂಗಳೂರು:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಿಎಂಟಿಸಿ ಸೇವೆ ನಿರ್ಬಂಧಿಸಲಾಗಿದೆ. ಆದರೆ ಇಂದು 134 ಅಗತ್ಯ ಸಾರಿಗೆ ಸೇವೆ ಇರಲಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ, ಬಿಎಂಟಿಸಿ ಬಸ್ ಸಂಚಾರ ಇರಲಿದೆ. ಅಗತ್ಯ ಸಾರಿಗೆ ಸೇವೆಯು ಬೆಳಗ್ಗೆ 7 ಗಂಟೆಯಿಂದ ರಾತ್ರಿ 7ಗಂಟೆವರೆಗೆ ಮಾತ್ರ ಇರಲಿದೆ.
ಬಿಎಂಟಿಸಿ ಪ್ರಯಾಣಿಸಲು ಇವರಿಗಷ್ಟೇ ಅನುಮತಿ:
ಕೇಂದ್ರ /ರಾಜ್ಯ ಸರ್ಕಾರ/ಅರೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ನೌಕರರು, ಸಾರ್ವಜನಿಕ ಉದ್ದಿಮೆ ನಿಗಮ ಮಂಡಳಿ ಮುಂತಾದವರು, ಪೊಲೀಸ್, ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅರಣ್ಯ ಇಲಾಖೆಗಳ ಸಿಬ್ಬಂದಿ, ತುರ್ತು ಸೇವೆಗಳ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗೆ ಅವಕಾಶವಿದೆ. ಇವರೆಲ್ಲ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು.