ಬೆಂಗಳೂರು: ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದುಕೊಂಡಿರುವ ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ನಗರದ ದಕ್ಷಿಣ ವಿಭಾಗ ಪೊಲೀಸರು ಮನೆಯಲ್ಲಿ ಇದ್ದುಕೊಂಡೇ ಭಾಗವಹಿಸಲು ಚಿತ್ರಕಲೆ ಹಾಗೂ ಪ್ರಬಂಧ ಸ್ಫರ್ಧೆಗಳನ್ನು ಆಯೋಜಿಸಿದ್ದಾರೆ.
ಮನೆಯಲ್ಲೇ ಇರಿ... ಚಿತ್ರ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ - bangalore lockdown latest news
ಲಾಕ್ಡೌನ್ ವೇಳೆ ಮನೆಯಲ್ಲಿಯೇ ಉಳಿದಿರುವ ಮಕ್ಕಳಿಗಾಗಿ ನಗರದ ದಕ್ಷಿಣ ವಿಭಾಗ ಪೊಲೀಸರು ಮನೆಯಲ್ಲಿ ಇದ್ದುಕೊಂಡೇ ಭಾಗವಹಿಸಬಹುದಾದ ಚಿತ್ರಕಲೆ ಹಾಗೂ ಪ್ರಬಂಧ ಸ್ಫರ್ಧೆಗಳನ್ನು ಆಯೋಜಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಹೀಗಾಗಿ ಸುಮ್ಮನೆ ಇರುವ ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಲು ಪೊಲೀಸರು ಈ ಸ್ಫರ್ಧೆ ಹಮ್ಮಿಕೊಂಡಿದ್ದಾರೆ. 14 ವರ್ಷದ ಒಳಗಿನ ಮಕ್ಕಳು ಪ್ರಕೃತಿ ಕುರಿತಂತೆ ಚಿತ್ರಕಲೆ ಸ್ಫರ್ಧೆ ಹಾಗೂ 15 ವರ್ಷದ ಮೇಲಿನ ಮಕ್ಕಳ ಕೃತಜ್ಞತೆ ವಿಷಯದಡಿ ಪ್ರಬಂಧ ಸ್ಫರ್ಧೆ ಏರ್ಪಡಿಸಲಾಗಿದೆ.
ಗಿರಿನಗರ, ಜೆ.ಪಿ ನಗರ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ಈ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಮನೆಯಲ್ಲಿಯೇ ಸ್ಫರ್ಧೆಯಲ್ಲಿ ಭಾಗಿಯಾಗಿ ಆಯಾ ಪೊಲೀಸ್ ಠಾಣೆಗಳ ಫೇಸ್ಬುಕ್ ಅಕೌಂಟ್ಗೆ ಕಳುಹಿಸಬೇಕು. ಈ ರೀತಿ ಲಾಕ್ಡೌನ್ನಲ್ಲಿ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಉತ್ತಮ ಕೆಲಸ.