ಕರ್ನಾಟಕ

karnataka

ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2ರ ಸೌಂದರ್ಯ ಹೆಚ್ಚಿಸಿದ ಬಿದಿರು - devanahalli airport

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಒಳಾಂಗಣವನ್ನು ಬಿದಿರಿನ ಮೂಲಕ ವಿನ್ಯಾಸ ಮಾಡಲಾಗಿದ್ದು ಆಕರ್ಷಣೆ ಹೆಚ್ಚಿಸಿದೆ.

Kempegowda International Airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

By

Published : Nov 10, 2022, 12:12 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನವೆಂಬರ್ 11 ರಂದು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ನೋಡಲು ಉದ್ಯಾನದಂತಿರುವ ಹೊಸ ಟರ್ಮಿನಲ್‌ನಲ್ಲಿ ಕಲಾತ್ಮಕವಾಗಿ ಬಿದಿರು ಬಳಕೆ ಮಾಡಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ.

ಬೆಂಗಳೂರು ನಗರಕ್ಕೆ ಗಾರ್ಡನ್ ಸಿಟಿ ಎಂಬ ಖ್ಯಾತಿ ಇದೆ. ಇದೇ ಮಾದರಿಯಲ್ಲಿ ಏರ್‌ಪೋರ್ಟ್‌ನ ಟರ್ಮಿನಲ್ ಅನ್ನು ಉದ್ಯಾನವನದಂತೆ ಸಿದ್ಧಪಡಿಸಲಾಗಿದೆ. ಟರ್ಮಿನಲ್ ಇನ್ ಎ ಗಾರ್ಡನ್ ಎಂಬ ವಿಷಯದ ಮೇಲೆ ಅಮೆರಿಕನ್ ಆರ್ಕಿಟೆಕ್ಚರಲ್ ಸಂಸ್ಥೆ ಸ್ಕಿಡ್ಮೋರ್, ಓವಿಂಗ್ಸ್ & ಮೆರಿಲ್ ವಿನ್ಯಾಸಗೊಳಿಸಿದ್ದು ಎಲ್ ಆ್ಯಂಡ್ ಟಿ ಕಂಪನಿ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿತ್ತು.

ವಿಮಾನ ನಿಲ್ದಾಣದ ಒಳಾಂಗಣವನ್ನು ನೈಸರ್ಗಿಕವಾಗಿ ಮಾಡಲು ಬಿದಿರನ್ನು ಹೆಚ್ಚಾಗಿ ಬಳಸಲಾಗಿದೆ. ಬೆಂಗಳೂರು ಮೂಲದ ಬ್ಯಾಂಬೂಜ್-ಫರ್ನ್ ಬಾಂಬು ಪ್ರೈವೇಟ್ ಲಿಮಿಟೆಡ್ ನಿಲ್ದಾಣದ ಒಳಾಂಗಣ ವಿನ್ಯಾಸ ಮಾಡಿದೆ.

ಗ್ರೀನ್ ಏರ್ ಪೋರ್ಟ್ ಪರಿಕಲ್ಪನೆ:ಏರ್ ಪೋರ್ಟ್ ಒಳಗೆ ಮೆಟ್ಟಿಲುಗಳನ್ನು ಇಳಿಯಲು ಮತ್ತು ಹತ್ತಲು ಸಹಾಯವಾಗುವ ಕೈಕಂಬಕ್ಕೆ ಬಿದಿರು ಬಳಕೆ ಮಾಡಲಾಗಿದೆ. ಸುಮಾರು 2 ಕಿ.ಮೀ ನಷ್ಟು ದೂರ ಕೈಕಂಬಗಳನ್ನು ಹಾಕಲಾಗಿದೆ.

ಛಾವಣಿ, ಮೆಟ್ಟಿಲು, ಕಂಬ, ರೇಲಿಂಗ್‌ಗಳಿಗೆ ವ್ಯಾಪಕವಾಗಿ ಬಿದಿರು ಬಳಕೆ ಮಾಡಲಾಗಿದೆ. ಬಿದಿರು ಬಳಕೆ ಪರಿಸರಸ್ನೇಹಿ ಮತ್ತು ಶೂನ್ಯ ಇಂಗಾಲವಾಗಿದೆ ಎಂದು ಬ್ಯಾಂಬೂಜ್ ಫರ್ನ್ ಬಾಂಬು ಪ್ರೈವೇಟ್ ಲಿಮಿಟೆಡ್‌ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಅಭಿಪ್ರಾಯಪಟ್ಟರು.

ABOUT THE AUTHOR

...view details