ಕರ್ನಾಟಕ

karnataka

ETV Bharat / state

ದೇಶದಲ್ಲೇ 2ನೇ ಅತೀ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣ ಹೊಂದಿದ ನಗರ ಬೆಂಗಳೂರು - Corona Latest News

ಮಹಾರಾಷ್ಟ್ರದ ಪುಣೆ 72,835 ಸಕ್ರಿಯ ಪ್ರಕರಣ ಹೊಂದಿದ್ದು, ದೇಶದ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನ ಬೆಂಗಳೂರಿಗಿದೆ. ಇಲ್ಲಿ 40, 936 ಕೊರೊನಾ ಸಕ್ರಿಯ ಪ್ರಕರಣಗಳಿವೆ..

Bangalore is the 2nd most active cases city in the country
ಕೋವಿಡ್​: ದೇಶದಲ್ಲೇ 2ನೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರ ಬೆಂಗಳೂರು

By

Published : Sep 12, 2020, 7:05 PM IST

ಬೆಂಗಳೂರು :ಭಾರತ ಸದ್ಯ ಜಗತ್ತಿನ 2ನೇ ಅತೀ ಹೆಚ್ಚು ಕೊರೊನಾ ಕೇಸ್​​ ದಾಖಲಾಗಿರುವ ದೇಶ ಎಂಬ ದಾಖಲೆ ಬರೆದಿದೆ. ದೇಶದ ಹಲವೆಡೆ ಕೊರೊನಾ ಪ್ರಕರಣ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿದೆ.

ಅಷ್ಟೇ ಅಲ್ಲ, ದೇಶದಲ್ಲಿಯೇ 2ನೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರ ಎಂಬ ಅಪಕೀರ್ತಿಗೆ ಬೆಂಗಳೂರು ಭಾಜನವಾಗಿದೆ. ಇದೀಗ ಪ್ರತಿ ರಾಜ್ಯದಲ್ಲೂ ಲಕ್ಷ ಲಕ್ಷ ಸೋಂಕಿತರು ದಾಖಲಾಗುತ್ತಿದ್ದಾರೆ.​

ದೇಶದಲ್ಲೇ 2ನೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರ ಬೆಂಗಳೂರು

ಅಷ್ಟೇ ಅಲ್ಲ, ರಾಜ್ಯದೊಳಗೆ ಅತೀ ಹೆಚ್ಚು ಪ್ರಕರಣ ಹೊಂದಿರುವ ನಗರ ಕೂಡ ಬೆಂಗಳೂರೇ.. ಮಹಾರಾಷ್ಟ್ರದ ಪುಣೆ 72,835 ಸಕ್ರಿಯ ಪ್ರಕರಣ ಹೊಂದಿದ್ದು, ದೇಶದ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನ ಬೆಂಗಳೂರಿಗಿದೆ. ಇಲ್ಲಿ 40, 936 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಅತೀ ಹೆಚ್ಚು ಸಕ್ರಿಯ ಪ್ರಕರಣ ಹೊಂದಿದ ನಗರಗಳು

ಪುಣೆ - 72,835
ಬೆಂಗಳೂರು-40,936
ದೆಹಲಿ - 26,907
ಚೆನ್ನೈ- 10,879
ಲಖನೌ- 9,260
ಕೋಲ್ಕತ್ತಾ- 4,615

ABOUT THE AUTHOR

...view details