ಕರ್ನಾಟಕ

karnataka

ETV Bharat / state

ಬೆಂಗಳೂರು ಒಂದು ವಾರ ಸಂಪೂರ್ಣ ಲಾಕ್‌ಡೌನ್: ಏನಿರುತ್ತೆ, ಏನಿರಲ್ಲ..? - Bangalore is a full lockdown

ಮಂಗಳವಾರ ರಾತ್ರಿಯಿಂದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಹೇರಲು ಸರ್ಕಾರ ನಿರ್ಧರಿಸಿದೆ.

Bangalore is a full lockdown
ಬೆಂಗಳೂರು ಒಂದು ವಾರ ಸಂಪೂರ್ಣ ಲಾಕ್‌ಡೌನ್

By

Published : Jul 11, 2020, 9:47 PM IST

ಬೆಂಗಳೂರು:ಕೊರೊನಾ ಅಟ್ಟಹಾಸಕ್ಕೆ ಅಂಕುಶ ಹಾಕಲು ಮಂಗಳವಾರ ರಾತ್ರಿಯಿಂದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಹೇರಲು ಸರ್ಕಾರ ಇದೀಗ ನಿರ್ಧರಿಸಿದೆ.

ಬೆಂಗಳೂರಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ತಜ್ಞರ ಸಮಿತಿ ಒಂದು ವಾರದ ಲಾಕ್‌ಡೌನ್ ಸಲಹೆ ನೀಡಿತ್ತು.‌ ಪರಿಸ್ಥಿತಿಯ ಗಂಭೀರತೆ ಅರಿತ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು, ಸಂಪೂರ್ಣ ಲಾಕ್‌ಡೌನ್ ಮಾಡಲು ತೀರ್ಮಾನಿಸಿದ್ದಾರೆ. ಈ ಹಿಂದೆ ಲಾಕ್‌ಡೌನ್ ವೇಳೆ ಇದ್ದ ನಿರ್ಬಂಧಗಳು ಈ ಒಂದು ವಾರದ ಲಾಕ್‌ಡೌನ್ ವೇಳೆ ಇರಲಿದೆ.

ನಾಳೆ ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದ್ದು, ವಿಸ್ತೃತ ಲಾಕ್‌ಡೌನ್ ಮಾರ್ಗಸೂಚಿಯನ್ನೂ ಹೊರಡಿಸಲಿದೆ.

ಲಾಕ್‌ಡೌನ್ ವೇಳೆ ಏ‌ನೆಲ್ಲಾ ಇರುವುದಿಲ್ಲ

  • ಹೋಟೆಲ್, ರೆಸ್ಟೋರೆಂಟ್, ಪಬ್​​ಗಿಲ್ಲ ಅವಕಾಶ
  • ಕೆಎಸ್ಆರ್​​ಟಿಸಿ, ಬಿಎಂಟಿಸಿ, ಒಲಾ, ಉಬರ್, ಆಟೋ ಇರಲ್ಲ
  • ಮೆಟ್ರೋ ರೈಲು, ವಿಮಾನ ಹಾರಾಟ ಇಲ್ಲ
  • ಸರ್ಕಾರಿ ಕಚೇರಿಗಳು ಬಂದ್
  • ಸಿನಿಮಾ ಥಿಯೇಟರ್, ಮಾಲ್ ಇರಲ್ಲ
  • ಬಾರ್​​ಗಳು, ಕ್ಲಬ್​​ಗಳು ಇರಲ್ಲ
  • ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಆಭರಣ ಅಂಗಡಿ ಇರಲ್ಲ
  • ಶಾಲಾ ಕಾಲೇಜುಗಳು, ಪಾರ್ಕ್ ಬಂದ್
  • ದೇಗುಲ, ಚರ್ಚ್, ಮಸೀದಿಗಳು ತೆರೆಯಲ್ಲ
  • ಧಾರ್ಮಿಕ ಸಭೆ, ಸಮಾರಂಭ, ಪ್ರಾರ್ಥನೆಗೆ ನಿಷೇಧ
  • ಕಂಟೇನ್​​ಮೆಂಟ್​ ಪ್ರದೇಶದಲ್ಲಿ ಎಲ್ಲವೂ ನಿಷೇಧ

ಲಾಕ್ ಡೌನ್​​ನಲ್ಲಿ ಏನೆಲ್ಲಾ ಇರಲಿದೆ

  • ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಓಪನ್
  • ದಿನಸಿ, ಹಾಲು, ಹಣ್ಣು, ತರಕಾರಿ ಅಬಾಧಿತ
  • ಅಗತ್ಯ ವಸ್ತು ಮಾರಾಟಕ್ಕೆ ನಿಷೇಧ ಇಲ್ಲ
  • ನಿಗದಿತ ವೈದ್ಯಕೀಯ ಪದವಿ ಮತ್ತು ಪಿಜಿ ಪರೀಕ್ಷೆ ಅಬಾಧಿತ
  • ಮಾಧ್ಯಮಗಳಿಗೆ ಇಲ್ಲ ನಿಷೇಧ
  • ಅಗತ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿ ಓಪನ್

ABOUT THE AUTHOR

...view details