ಬೆಂಗಳೂರು:ದೇಶವ್ಯಾಪಿ ನಡೆಯುತ್ತಿರುವ ಎಂಎಸ್ಎಂಇ ಬಂದ್ಗೆ ನಗರದ ಕೈಗಾರಿಕೆಗಳು ಕೈ ಜೋಡಿಸಿದ್ದು, ಕಬ್ಬು, ಸಿಮೆಂಟ್, ತಾಮ್ರ, ಸ್ಟೀಲ್ ಸೇರಿದಂತೆ ಹಲವು ವಸ್ತುಗಳ ಬೆಲೆ ಶೇ.40 ಕ್ಕಿಂತ ಹೆಚ್ಚಳಗೊಂಡಿದೆ. ಇದನ್ನು ಕೂಡಲೇ ಕೇಂದ್ರ,ರಾಜ್ಯ ಸರ್ಕಾರಗಳು ಇಳಿಸಬೇಕೆಂದು ಆಗ್ರಹಿಸಿವೆ.
ಎಂಎಸ್ಎಂಇ ಬಂದ್ಗೆ ನಗರದ ಕೈಗಾರಿಕೆಗಳು ಸಾಥ್ ಮಾಗಡಿ ರಸ್ತೆಯ ಮಾಚೋಹಳ್ಳಿ ಕೈಗಾರಿಕಾ ಸಂಘ ಇಂದು ಬಂದ್ಗೆ ಸಾಥ್ ನೀಡಿದ್ದು, ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಮತ್ತು ಚಂಡಮಾರುತದಿಂದ ಸುಧಾರಣೆಗೊಳ್ಳುತ್ತಿರುವ ಸಮಸಯದಲ್ಲಿ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದರಿಂದ ಗುಡಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಚೋಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಸಾಗರ್ ಬೇಸರ ವ್ಯಕ್ತಪಡಿಸಿದರು.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ತಯಾರಿಕಾ ವೆಚ್ಚ ಹೆಚ್ಚಳ ಆಗುತ್ತಿದೆ. ಆದರೆ, ಉತ್ಪನ್ನಗಳ ಮಾರಾಟಕ್ಕೆ ಬೇಡಿಕೆ ಇಲ್ಲ. ಇದರಿಂದ ನಮಗೆ ನಷ್ಟ ಉಂಟಾಗಿದೆ. ಇದರ ಜೊತೆಗೆ ಕಾರ್ಮಿಕರ ಕೊರತೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಮೂಲ ಸೌಕರ್ಯಗಳ ಕೊರತೆ ಇದೆ ಎಂದರು.
ಹಣಕಾಸಿನ ನೆರವಿಗೆ ಬಹಳ ತೊಂದರೆಯಾಗುತ್ತಿದೆ. ಇದಕ್ಕೆ ಪೂರಕ ಸಹಾಯವನ್ನು ಬ್ಯಾಂಕ್ಗಳು ಮಾಡುತ್ತಿಲ್ಲ. ವಿದ್ಯುತ್ ದರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ದರವೂ ಗಗನಕ್ಕೇರಿದೆ. ಸರ್ಕಾರ ಇದಕ್ಕೆ ಪರಿಹಾರ ನೀಡುತ್ತಿಲ್ಲ. ಹೀಗಾದರೆ ಎಂಎಸ್ಎಂಇ ಉಳಿವು ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಒಮಿಕ್ರಾನ್ ಭೀತಿ : ಬೆಂಗಳೂರಲ್ಲಿ ಜನರು ಜವಾಬ್ದಾರಿಯಿಂದ ಇರಬೇಕು.. ಬಿಬಿಎಂಪಿ ಆಯುಕ್ತರ ಮನವಿ