ಬೆಂಗಳೂರು : ಗಾಂಧೀಜಿ ಅವರ 150ನೇ ವರ್ಷಾಚರಣೆ ಪ್ರಯುಕ್ತ, ದೇಶದೆಲ್ಲೆಡೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ಸಿಕ್ಕ ಹಿನ್ನೆಲೆಯಲ್ಲಿ, ಭಾನುವಾರ ಇಂದಿರಾನಗರದ ಹೋಟೆಲ್ಗಳ ಸಿಬ್ಬಂದಿಗಳು ರಸ್ತೆಗಿಳಿದು ಸ್ವಚ್ಛತಾ ಕಾರ್ಯ ಮಾಡಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಅಭಿಯಾನ: ರಸ್ತೆಗಿಳಿದು ಸ್ವಚ್ಚತಾ ಕಾರ್ಯ ಮಾಡಿದ ಹೋಟೆಲ್ ಸಿಬ್ಬಂದಿಗಳು
ಇಂದಿರಾ ನಗರದಲ್ಲಿರುವ ಬಹುತೇಕ ಎಲ್ಲಾ ಪಬ್ ಮತ್ತು ಹೋಟೆಲ್ಗಳ ಸಿಬ್ಬಂದಿವರ್ಗದವರು ಇಂದಿರಾನಗರದ, ಪಾಪರೆಡ್ಡಿಪಾಳ್ಯ, ಎಚ್ಎಎಲ್ ಎರಡನೇ ಹಂತದ ಸಂಪೂರ್ಣ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು.
ಭಾನುವಾರ ಮುಂಜಾನೆ 7 ಗಂಟೆಯಿಂದ, ಇಂದಿರಾ ನಗರದಲ್ಲಿರುವ ಬಹುತೇಕ ಎಲ್ಲಾ ಪಬ್ ಮತ್ತು ಹೋಟೆಲ್ಗಳ ಸಿಬ್ಬಂದಿವರ್ಗದವರು ಇಂದಿರಾನಗರದ, ಪಾಪರೆಡ್ಡಿಪಾಳ್ಯ, ಎಚ್ಎಎಲ್ ಎರಡನೇ ಹಂತದ ಸಂಪೂರ್ಣ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು. ಕಾರ್ಯಕ್ರಮಕ್ಕೆ ಇಂದಿರಾ ನಗರದ ನಿವಾಸಿಗಳು ಮತ್ತು ಮಕ್ಕಳು ಸಹ ಕೈಜೋಡಿಸಿದ್ದರು.
ಈಗಾಗಲೇ ಬಿಬಿಎಂಪಿ ನಗರದ ಅನೇಕ ಸ್ಟಾರ್ ಹೋಟೆಲ್ಗಳು ಸೇರಿದಂತೆ ಮಳಿಗೆಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡಿದಕ್ಕೆ ದಂಡವನ್ನು ವಿಧಿಸಿದ್ದು, ಕಸಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡದ ಕಾರಣಕ್ಕೆ ಎಚ್ಚರಿಕೆ ನೀಡುತ್ತಿರುವ ಈ ಸಂದರ್ಭದಲ್ಲಿ, ಹೋಟೆಲ್ ಮತ್ತು ಪಬ್ಗಳು ಸ್ವಯಂಪ್ರೇರಿತವಾಗಿ ರಸ್ತೆಗಿಳಿದು ಪ್ಲಾಸ್ಟಿಕ್ ಮುಕ್ತ ಬಡಾವಣೆ ಮಾಡಲು ಪಣ ತೊಟ್ಟಿರುವುದು ನಿವಾಸಿಗಳ ಪ್ರಶಂಸೆಗೆ ಪಾತ್ರವಾಗಿದೆ.