ಕರ್ನಾಟಕ

karnataka

ETV Bharat / state

ಕೊಲ್ಕತ್ತಾವನ್ನೇ ಮೀರಿಸುತ್ತಾ ಬೆಂಗಳೂರು: ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ!

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು 889 ಮಂದಿಗೆ ಸೋಂಕು ಹರಡಿದೆ. ಒಟ್ಟು ಸೋಂಕಿತರ ಸಂಖ್ಯೆ ವಾರ್ ರೂಮ್​ ವರದಿ ಪ್ರಕಾರ 6179ಕ್ಕೆ ಏರಿಕೆಯಾಗಿದೆ.

ಕೊರೊನಾ
ಕೊರೊನಾ

By

Published : Jul 2, 2020, 10:54 PM IST

ಬೆಂಗಳೂರು: ಸತತ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಸಿಲಿಕಾನ್​​ ಸಿಟಿಯಲ್ಲಿ ಏರುತ್ತಲೇ ಇದೆ. ಇಂದು ದಾಖಲೆ ಮುರಿದ ಕೊರೊನಾ ಒಂದೇ ದಿನದಲ್ಲಿ 889 ಮಂದಿಗೆ ಹರಡಿದೆ. ಸೋಂಕು ಹರಡುವಿಕೆ ಆರಂಭವಾದ ಕಳೆದ 115 ದಿನಗಳಲ್ಲಿ ಇಷ್ಟು ಪ್ರಕರಣ ಇದೇ ಮೊದಲಿಗೆ ದಾಖಲಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ ವಾರ್ ರೂಮ್​ ವರದಿ ಪ್ರಕಾರ 6179ಕ್ಕೆ ಏರಿಕೆಯಾಗಿದೆ. ಗುಣಮುಖರಾಗಿರುವುದು ಕೇವಲ 573 ಮಂದಿ. ಕಳೆದ ಹತ್ತು ದಿನದಿಂದ ಬೆಂಗಳೂರು ದೇಶದಲ್ಲಿ ಐದನೇ ಸ್ಥಾನದಲ್ಲಿತ್ತು,‌ ಆದರೆ ಇದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾದರೆ ಇನ್ನೊಂದೇ ದಿನದಲ್ಲಿ ಕೊಲ್ಕತ್ತಾವನ್ನೂ ಬೆಂಗಳೂರು ಮೀರಿಸಲಿದೆ.

ಸದ್ಯ ಕೊಲ್ಕತ್ತಾದಲ್ಲಿ 6,222 ಪಾಸಿಟಿವ್ ಪ್ರಕರಣ ಇದೆ. 1958 ಮಂದಿ ಗುಣಮುಖರಾಗಿದ್ದಾರೆ. 43 ಮಂದಿ ಮಾತ್ರ ಸೋಂಕಿತರು ಕೊಲ್ಕತ್ತಾದಲ್ಲಿ ಹೆಚ್ಚಿದ್ದಾರೆ. ದೆಹಲಿ, ಮುಂಬೈ, ಚೆನ್ನೈ ನಂತರದ ಸಾಲಿಗೆ ಬೆಂಗಳೂರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯಕ್ಕೆ ತೀವ್ರ ಕೊರತೆಯಾಗಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಅತಿಹೆಚ್ಚು ಕೊರೊನಾ ಹರಡಿದ ವಾರ್ಡ್​ಗಳು:

  • ಶಾಂತಲಾ ನಗರ- 30
  • ಸಿಂಗಸಂದ್ರ- 29
  • ಜಯನಗರ -22
  • ಧರ್ಮರಾಯ ಸ್ವಾಮಿ ಟೆಂಪಲ್- 21
  • ವಿದ್ಯಾಪೀಠ- 20
  • ಹೊಂಬೇಗೌಡ ನಗರ- 18
  • ಸುದ್ದಗುಂಟೆ ಪಾಳ್ಯ- 15
  • ಆರ್. ಆರ್. ನಗರ-14
  • ಜಯನಗರ ಪೂರ್ವ- 14
  • ಬಸವನಗುಡಿ-13
  • ಕತ್ರಿಗುಪ್ಪೆ-13
  • ಪಟ್ಟಾಭಿರಾಮನಗರ- 12
  • ಸುಧಾಮನಗರ-12
  • ಅರಕೆರೆ-12
  • ಮಡಿವಾಳ -10

ABOUT THE AUTHOR

...view details