ರಾಜಧಾನಿಯಲ್ಲಿ ಕೊರೊನಾ ಇಳಿಕೆ, ಆದ್ರೆ ಆಸ್ಪತ್ರೆಗೆ ದಾಖಲಾಗ್ತಿರುವ ಸಂಖ್ಯೆಯಲ್ಲಿ ಏರಿಕೆ? ಅಂಕಿ-ಅಂಶ ನೋಡಿ - Bangalore Covid
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿರುವುದು ಭಯ ಹುಟ್ಟಿಸಿದೆ.
Bangalore ICU
By
Published : May 28, 2021, 1:06 AM IST
ಬೆಂಗಳೂರು:ರಾಜಧಾನಿಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಂಡಿರುವ ಕಾರಣ ಕಳೆದ ಕೆಲ ದಿನಗಳಿಂದ ಕೊರೊನಾ ಕೇಸ್ಗಳು ಇಳಿಕೆಯಾಗಿವೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕಳೆದ ಏಳು ದಿನಗಳಲ್ಲಿ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಾದವರ ಮಾಹಿತಿ ಈ ವರದಿಯಲ್ಲಿದೆ. ಮೇ 21ರಿಂದ 27ರವರೆಗೆ ಅಂದರೆ ಏಳು ದಿನಗಳಲ್ಲಿ 3,542 ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರೆಲ್ಲರೂ ಕೊರೊನಾ ಸೋಂಕಿನಿಂದಲೇ ಆಸ್ಪತ್ರೆಗಳಿಗೆ ದಾಖಲಾಗಿರುವುದು ಗಮನಾರ್ಹವಾಗಿದೆ.
3,542 ಜನರಲ್ಲಿ 1,528 ಸೋಂಕಿತರು ಜನರಲ್ ವಾರ್ಡ್ಗೆ ದಾಖಲಾಗಿದ್ದು,1,799 ಸೋಂಕಿತರು ಹೆಚ್ಡಿಯೂ(ಹೈಡಿಪೆಂಡೆನ್ಸಿ ಯೂನಿಟ್ಸ್)ಗೆ ದಾಖಲಾಗಿದ್ದಾರೆ. 121 ಜನರು ಐಸಿಸಿಯ ಹಾಗೂ 94 ರೋಗಿಗಳು ಐಸಿಯು ವಿತ್ ವೆಂಟಿಲೇಟರ್ಗೆ ದಾಖಲಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿದಿನ ಐಸಿಯು ಹಾಗೂ ವೆಂಟಿಲೇಟರ್ಗೆ ಬೇಡಿಕೆ ಸ್ವಲ್ಪವೂ ತಗ್ಗಿಲ್ಲ.
ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ಗಾಗಿ ಆಸ್ಪತ್ರೆಗೆ ಹೋಗುತ್ತಿರುವವರು ಪಾಸಿಟಿವ್ ಬಂದವರಲ್ಲಿ ಶೇಕಡಾ 70%ರಷ್ಟು ಆಗಿದ್ದು, ಜನರಲ್ ಬೆಡ್ಗಳಿಗಿಂತ ಆಕ್ಸಿಜನ್,ಐಸಿಯು, ವೆಂಟಿಲೇಟರ್ ಬೆಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಂಪೂರ್ಣ ಮಾಹಿತಿ ಇಲ್ಲಿದೆ
ದಿನಾಂಕ
ಆಸ್ಪತ್ರೆಗೆ ದಾಖಲಾದವರ ಸಂಖ್ಯೆ
ಹೆಚ್ಡಿಯು
ಐಸಿಯು
ಐಸಿಯು+ವೆಂಟಿಲೇಟರ್
ಮೇ 21
680 ರೋಗಿಗಳು
375 ರೋಗಿಗಳು
25 ರೋಗಿಗಳು
ಮೇ 22
624
342
34
ಮೇ 23
591
338
20
ಮೇ 24
578
322
39
ಮೇ 25
521
302
36
ಮೇ 26
498
301
53
ಮೇ 27
50
34
08
ಒಟ್ಟು 94 ರೋಗಿಗಳು
ಒಟ್ಟು 3,542 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 2014ಹೆಚ್ಡಿಯು ,215 ಐಸಿಯು ಹಾಗೂ 94 ರೋಗಿಗಳು ಐಸಿಯು ವಿತ್ ವೆಂಟಿಲೇಟರ್ನಲ್ಲಿ ದಾಖಲಾಗಿದ್ದಾರೆ.