ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮಕ್ಕಳು-ಮಹಿಳೆಯರ ಸುರಕ್ಷತೆಗೆ ಒತ್ತು: ನಗರದೆಲ್ಲೆಡೆ ಹೈ ಕ್ವಾಲಿಟಿ ಸಿಸಿಟಿವಿ ಹದ್ದಿನ ಕಣ್ಣು - High Quality CCTV

ಈ ಸಿಸಿಟಿವಿಗಳನ್ನು ಖಾಸಗಿ ಸಂಸ್ಥೆಗಳು ತಮ್ಮ ಸ್ವಇಚ್ಛೆಯಿಂದ ನಗರದ ಸುರಕ್ಷತೆಗಾಗಿ ನೀಡಿದ್ದಾರೆ. ಈ ಸಿಸಿಟಿವಿಗಳನ್ನು ಪೊಲೀಸ್ ಠಾಣೆಯಲ್ಲೇ ಕುಳಿತು ಸಿಬ್ಬಂದಿ ಮಾನಿಟರಿಂಗ್ ಮಾಡಲಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ವ್ಯವಸ್ಥೆ ಅನುಕೂಲ ಆಗಲಿದೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಹೇಳಿದ್ದಾರೆ.

bangalore: High Quality CCTV for the Safety of Children-Women
ಮಕ್ಕಳು-ಮಹಿಳೆಯರ ಸುರಕ್ಷತೆಗೆ ಹೈ ಕ್ವಾಲಿಟಿ ಸಿಸಿಟಿವಿ

By

Published : Nov 6, 2020, 12:07 PM IST

ಬೆಂಗಳೂರು: ಮಕ್ಕಳು - ಮಹಿಳೆಯರ ರಕ್ಷಣೆಗೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ವಿಭಾಗದ ಅಶೋಕ್ ನಗರ ಪೊಲೀಸರು ಹೈ ಕ್ವಾಲಿಟಿ 110 ಸಿಸಿಟಿವಿಗಳನ್ನು ಪ್ರತಿ ಜಂಕ್ಷನ್, ಸೂಕ್ಷ ಪ್ರದೇಶ, ಕ್ರೈಂ ಚಟುವಟಿಕೆ ನಡೆಯುವ ಸ್ಥಳ, ಮಾಲ್, ಪಬ್ ರಸ್ತೆಗಳ ಬಳಿ ಅಳವಡಿಕೆ ಮಾಡಿದ್ದಾರೆ.

ಈ ಸಿಸಿಟಿವಿ ಅಳವಡಿಕೆ ಕುರಿತ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​, ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಹಾಗೂ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಉದ್ಘಾಟನೆ ಮಾಡಿದರು.

ಮಕ್ಕಳು-ಮಹಿಳೆಯರ ಸುರಕ್ಷತೆಗೆ ಹೈಕ್ವಾಲಿಟಿ ಸಿಸಿಟಿವಿ

ಈ ಸಿಸಿಟಿವಿಗಳನ್ನು ಖಾಸಗಿ ಸಂಸ್ಥೆಗಳು ತಮ್ಮ ಸ್ವಇಚ್ಛೆಯಿಂದ ನಗರದ ಸುರಕ್ಷತೆಗಾಗಿ ನೀಡಿದ್ದಾರೆ. ಈ ಸಿಸಿಟಿವಿಗಳನ್ನು ಪೊಲೀಸ್ ಠಾಣೆಯಲ್ಲೇ ಕುಳಿತು ಸಿಬ್ಬಂದಿ ಮಾನಿಟರಿಂಗ್ ಮಾಡಲಿದ್ದಾರೆ. ಸಿಸಿಟಿವಿ ಅಳವಡಿಕೆಗೆ ಸ್ಪಾನ್ಸರ್ ಮಾಡಿದ ಪ್ರತಿ ವ್ಯಕ್ತಿಗಳಿಗೆ ನಗರ ಪೊಲೀಸ್ ಆಯುಕ್ತ ಭೇಷ್ ಎಂದು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸಿಸಿಟಿವಿ ಅಳವಡಿಕೆಯಿಂದ ಅಪರಾಧ ಎಸಗುವವರ ಚಲನವಲನಗಳನ್ನು ಗುರುತಿಸಬಹುದು. ಹಾಗೆ ಕ್ರೈಂ ತಡೆಗಟ್ಟಲು ಇದು ಸಹಯಾಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details