ಬೆಂಗಳೂರು: ನಗರದಲ್ಲಿ ಸೈಬರ್ ಖದೀಮರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಟೆಲಿಗ್ರಾಂ ಆ್ಯಪ್ನಲ್ಲಿ ಪರಿಚಯವಾಗಿದ್ದ ಸೈಬರ್ ವಂಚಕರು ಲಾಕ್ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿರುವ ವ್ಯಕ್ತಿಗೆ ಹೂಡಿಕೆ ಹೆಸರಿನಲ್ಲಿ ದೋಖಾ ಮಾಡಿದ್ದಾರೆ.
ಹುಷಾರ್.. ಹುಷಾರ್..: ಹೂಡಿಕೆ ನೆಪದಲ್ಲಿ ಸೈಬರ್ ಖದೀಮರಿಂದ ವಂಚನೆ - Fraud by cyber crooks in investment ventures
ಟೆಲಿಗ್ರಾಂ ಆ್ಯಪ್ನಲ್ಲಿ ಪರಿಚಯವಾಗಿದ್ದ ಸೈಬರ್ ವಂಚಕರು ಲಾಕ್ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿರುವ ವ್ಯಕ್ತಿಗೆ ಹೂಡಿಕೆ ಹೆಸರಿನಲ್ಲಿ ದೋಖಾ ಮಾಡಿದ್ದಾರೆ.
![ಹುಷಾರ್.. ಹುಷಾರ್..: ಹೂಡಿಕೆ ನೆಪದಲ್ಲಿ ಸೈಬರ್ ಖದೀಮರಿಂದ ವಂಚನೆ Bangalore](https://etvbharatimages.akamaized.net/etvbharat/prod-images/768-512-8273739-214-8273739-1596422510020.jpg)
ಆರ್.ಟಿ ನಗರದ ನಿವಾಸಿ ಶ್ರೀ ಗಣೇಶ್ ಎಂಬುವವರು ಟೆಲಿಗ್ರಾಂ ಆ್ಯಪ್ನಲ್ಲಿ ಸಕ್ರಿಯರಾಗಿದ್ದರು. ಆದರೆ, ಇತ್ತೀಚೆಗೆ ಗಣೇಶ್ ಅವರನ್ನ ಪರಿಚಯಿಸಿಕೊಂಡ ಆರೋಪಿಗಳು ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸಿ ಬಿಟ್ ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದರು. ಹೂಡಿಕೆ ವಿಚಾರದಲ್ಲಿ ಮೊದಲೇ ಆಸಕ್ತಿ ಇರುವ ಕಾರಣ ಇದನ್ನ ನಂಬಿದ ಗಣೇಶ್ ಲಾಭದ ದೃಷ್ಟಿಯಿಂದ ಸೈಬರ್ ಖದೀಮರು ಹೇಳಿದ ಹಾಗೆ 85 ಸಾವಿರ ರೂ. ಹಣ ಜಮಾವಣೆ ಮಾಡಿದ್ದಾರೆ. ನಂತರ ಖದೀಮರು ಹಣವನ್ನು ಕೊಡದೇ ಗಣೇಶ್ ಅವರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.
ಇನ್ನು ತಾನು ಸೈಬರ್ ಖದೀಮರಿಂದ ಮೋಸ ಹೋದ ವಿಚಾರ ತಿಳಿದು ದಕ್ಷಿಣ ವಿಭಾಗದ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ