ಕರ್ನಾಟಕ

karnataka

ETV Bharat / state

ಒತ್ತುವರಿದಾರರಿಗೆ ಸಹಕಾರ ಆರೋಪ:‌ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್​ ಅಜಿತ್ ರೈ ಅಮಾನತು - Tahashildar Ajit Rai suspended

ಒತ್ತುವರಿ ತೆರವು ಮಾಡದೇ, ಒತ್ತುವರಿದಾರರಿಗೆ ಕೋರ್ಟ್​ನಿಂದ ಸ್ಟೇ ತರಲು ತಹಶೀಲ್ದಾರ್​ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕಾನೂನು ಉಲ್ಲಂಘನೆಯಾಗಿದ್ದು, ಹಾಗಾಗಿ ತಹಶೀಲ್ದಾರ್​​ ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

Tahashildar Ajit Rai
ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್​ ಅಜಿತ್ ರೈ ಅಮಾನತು

By

Published : Nov 24, 2022, 7:20 PM IST

ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ರಾಜಕಾಲುವೆ ಮೇಲಿರುವ ಕಟ್ಟಡ ಹಾಗೂ ಇತರ ಜಾಗ ಒತ್ತುವರಿ ತುರ್ತಾಗಿ ತೆರವುಗೊಳಿಸಿಲ್ಲ. ಈ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಬೆಂಗಳೂರು ಪೂರ್ವ ತಾಲೂಕು ಕೆಆರ್​​​ಪುರಂ ತಹಶೀಲ್ದಾರ್​​ ಅಜಿತ್ ರೈ ಅವರನ್ನು ನಗರಾಭಿವೃದ್ಧಿ ಇಲಾಖೆ ಅಮಾನತು ಮಾಡಿ ಆದೇಶಿಸಿದೆ.

ಅಮಾನತು ಆದೇಶ ಪ್ರತಿ

ಮಹದೇವಪುರ ಕ್ಷೇತ್ರದ ಸರ್ಜಾಪುರ ಬಳಿಯ ರೈನ್ ಬೋ ಲೇಔಟ್ ಸೇರಿದಂತೆ ಹಲವಡೆ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಒತ್ತುವರಿ ತೆರವು ಮಾಡದೇ, ಒತ್ತುವರಿದಾರರಿಗೆ ಕೋರ್ಟ್​ನಿಂದ ಸ್ಟೇ ತರಲು ತಹಶೀಲ್ದಾರ್​ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕಾನೂನು ಉಲ್ಲಂಘನೆಯಾಗಿದ್ದು, ಹಾಗಾಗಿ ತಹಶೀಲ್ದಾರ್​​ ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಜತೆಗೆ ಇಲಾಖೆಯ ವಿಚಾರಣೆಗೂ ಆದೇಶಿಸಲಾಗಿದೆ.

ಇದನ್ನೂ ಓದಿ:ಟ್ರಾಫಿಕ್, ಆರ್‌ಟಿಒ ಅಧಿಕಾರಿಗಳ ಜಂಟಿ ಕಾರ್ಯಾಚರಣೆ: 35 ಆಟೋಗಳು ಜಪ್ತಿ

ABOUT THE AUTHOR

...view details