ಬೆಂಗಳೂರು: ರಾಜ್ಯದಲ್ಲಿ ಬೇರೂರಿರುವ ಮಾದಕ ವಸ್ತು ಜಾಲಗಳಲ್ಲಿ ಪ್ರತಿಷ್ಠಿತ ಸ್ಯಾಂಡಲ್ವುಡ್ ನಟ, ನಟಿಯರು, ಸಂಗೀತಗಾರರು, ರಿಯಾಲಿಟಿ ಶೋ ಸ್ಪರ್ಧಿಗಳು, ನಿರ್ದೇಶಕರು, ಪ್ರಭಾವಿ ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು ಭಾಗಿಯಾಗಿದ್ದು, ಸದ್ಯ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್ಸಿಬಿ) ನೋಟಿಸ್ ಕೊಟ್ಟು ಕೆಲವರನ್ನ ವಿಚಾರಣೆ ನಡೆಸಲು ಮುಂದಾಗಿದೆ.
ನಟ, ನಟಿ, ಸಂಗೀತ ನಿರ್ದೇಶಕರ ವಿಚಾರಣೆಗೆ ನಿರ್ಧಾರ ಸದ್ಯ ಮಾದಕ ದ್ರವ್ಯದ ತನಿಖೆಯ ಹೊಣೆಯನ್ನ ಎನ್ಸಿಬಿ ಹೆಚ್ಚುವರಿ ಅಧಿಕಾರಿ ಮಲ್ಹೋತ್ರ ಜವಾಬ್ದಾರಿ ಹೊತ್ತಿದ್ದು, ನಗರದಲ್ಲಿ ಮಾದಕ ದ್ರವ್ಯ ಮಾರಾಟ ಜಾಲದ ಪತ್ತೆಗೆ ಮುಂದಾಗಿದ್ದಾರೆ. ಮಾದಕ ಲೋಕದ ಸುಂದರಿ ಅನಿಕಾ ಹಾಗೂ ಆಕೆಯ ಜೊತೆ ಭಾಗಿಯಾದ ಇಬ್ಬರು ಡ್ರಗ್ಸ್ ಪೆಡ್ಲರ್ಗಳು ಚಂದನವನಕ್ಕೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಾರೆಂಬ ಮಾಹಿತಿಯನ್ನ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವ ನಟ-ನಟಿಯರು ಡ್ರಗ್ಸ್ಗೆ ಅಡಿಕ್ಟ್ ಆಗಿದ್ದರು ಎಂಬ ಮಾಹಿತಿಯನ್ನ ಸದ್ಯ ಎನ್ಸಿಬಿ ಅಧಿಕಾರಿಗಳು ಗುಪ್ತವಾಗಿಟ್ಟು ತನಿಖೆಗೆ ಇಳಿದಿದ್ದಾರೆ.
ಎನ್ ಸಿಬಿಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೆಸರುಗಳನ್ನ ಬಹಿರಂಗ ಮಾಡಿಲ್ಲ. ಬಂಧಿತ ಆರೋಪಿಗಳ ಹೇಳಿಕೆಯ ಆಧಾರದ ಮೇರೆಗೆ ಕೆಲವರಿಗೆ ನೋಟಿಸ್ ಜಾರಿ ಮಾಡಿ, ಗುಪ್ತವಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ. ಒಂದು ವೇಳೆ ಚಂದನವನದಲ್ಲಿ ಕೂಡ ಡ್ರಗ್ಸ್ ವ್ಯಸನಿಗಳು ಸಿಕ್ಕಿ ಹಾಕಿಕೊಂಡ್ರೆ ಅವರನ್ನ ಎನ್ಸಿಬಿ ಖೆಡ್ಡಾಕ್ಕೆ ಕೆಡವಲಿದೆ.
ನಟ, ನಟಿ, ಸಂಗೀತ ನಿರ್ದೇಶಕರ ವಿಚಾರಣೆಗೆ ನಿರ್ಧಾರ ಹೈಫೈ ಡ್ರಗ್ಸ್ ಖರೀದಿ...
ಸ್ಯಾಂಡಲ್ವುಡ್ನಲ್ಲಿರುವ ಕೆಲವರು ಮಾದಕ ಲೋಕದಲ್ಲಿ ತೇಲಲು ಲೋಕಲ್ ಗಾಂಜಾ ಖರೀದಿ ಮಾಡ್ತಿರಲಿಲ್ಲ. ಅದರ ಬದಲು ಅನಿಕಾ ಮಾರಾಟ ಮಾಡುತ್ತಿದ್ದ ನಶೆ ಏರಿಸುವ ಮಾತ್ರೆಗಳನ್ನೇ ಖರೀದಿಸುತ್ತಿದ್ದರು. ಈ ಡ್ರಗ್ಸ್ಅನ್ನು ವಿದೇಶದಲ್ಲಿ ದೊಡ್ಡ-ದೊಡ್ಡ ಪಾರ್ಟಿ, ಗೋವಾ ಸೇರಿದಂತೆ ಇತರೆ ಕಡೆಗಳಲ್ಲಿ ಹೈಫೈ ಜನ ಬಳಸುತ್ತಾರೆ ಎನ್ನಲಾಗ್ತಿದೆ. ಇದು ನೋಡೋದಕ್ಕೆ ಪಿಂಕ್ ಕಲರ್, ರೆಡ್ ಕಲರ್ನಲ್ಲಿರುತ್ತವೆ. ಹೈಫೈಯಾಗಿ ಮಾದಕ ಲೋಕದಲ್ಲಿ ತೇಲಲು ಇದನ್ನ ಖರೀದಿ ಮಾಡುತ್ತಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.