ಕರ್ನಾಟಕ

karnataka

ETV Bharat / state

ಮಿಡ್ ನೈಟ್ ಕಾರ್ಯಾಚರಣೆ : ಮತ್ತೆ 30 ಜನರ ಬಂಧನ, ಬಂಧಿತರ ಸಂಖ್ಯೆ 380ಕ್ಕೇರಿಕೆ - ಬೆಂಗಳೂರು

ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ನಂಟು ಹೊಂದಿರುವ ಶಂಕೆ ಹಿನ್ನೆಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು, ಮತ್ತೆ 330 ಜನರನ್ನು ಬಂಧಿಸಿದ್ದಾರೆ.

30 ಜನರ ಬಂಧನ
30 ಜನರ ಬಂಧನ

By

Published : Aug 18, 2020, 7:07 AM IST

ಬೆಂಗಳೂರು :ಕೆ.ಜಿ‌ ಹಳ್ಳಿ ಡಿ.ಜೆ ‌ಹಳ್ಳಿ ಪ್ರಕರಣ ದಿನೇ ದಿನೆ ತಿರುವು ಪಡೆದುಕೊಳ್ಳುತ್ತಿದ್ದು, ಉಗ್ರರ ನಂಟು ಹೊಂದಿರುವ ಶಂಕೆ ಹಿನ್ನೆಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ಮಿಡ್ ನೈಟ್ ಕಾರ್ಯಾಚರಣೆ ನಡೆಸಿ ಮತ್ತೆ 30 ಜನರನ್ನು ಬಂಧಿಸಿದ್ದಾರೆ.

ಅವಿತು ಕೂತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಿ, ಸುಮಾರು 30 ಜನರನ್ನ ಬಂಧಿಸಿದ್ದಾರೆ. ಈ ಮುಖಾಂತರ ಬಂಧಿತರ ಸಂಖ್ಯೆ 380ಕ್ಕೂ ಹೆಚ್ಚಾಗಿದೆ. ಇವರ ಬಂಧನಕ್ಕೂ ಮುನ್ನ ಯಾವ ರೀತಿ ದಾಳಿ ನಡೆಸಬೇಕು ಎಂಬ ಬಗ್ಗೆ ಅಧಿಕಾರಿಗಳು ಪ್ಲಾನ್​ ರೂಪಿಸಿಕೊಂಡಿದ್ದರು.

ಸಿಸಿಬಿ ಡಿಸಿಪಿ ರವಿ ಕುಮಾರ್ ಅವರು ಮಿಡ್ ನೈಟ್ ಕಾರ್ಯಾಚರಣೆಗೆ ಇಳಿದು, ಈಗಾಗಲೇ ಬಂಧಿತ ಪ್ರಮುಖ ಆರೋಪಿಗಳ‌ ಜೊತೆ ಕೈ ಜೋಡಿಸಿದ್ದ ಕಿಡಿಗೇಡಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ಒಂದೊಂದು ಹೇಳಿಕೆ ಕೂಡ ಸಿಸಿಬಿ ಪೊಲೀಸರಿಗೆ ಅಗತ್ಯವಾಗಿದೆ. ಹೀಗಾಗಿ ಆರೋಪಿಗಳ ಪೂರ್ವಾಪರ ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details