ಬೆಂಗಳೂರು:ನಗರದ ಪೂರ್ವ ವಿಭಾಗದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಡಿಸಿಪಿ ಶರಣಪ್ಪ ಬ್ರೇಕ್ ಹಾಕಿದ್ದಾರೆ.
ಶಿವಾಜಿನಗರ ಸೇರಿ ವಿವಿಧ ಕಡೆಗಳಿಗೆ ತೆರಳಿ ಪರಿಶೀಲಿಸಿ ರಸ್ತೆಗಿಳಿದಿದ್ದ ಪ್ರತಿಯೊಂದು ವಾಹನ ಸಂಚಾರದ ತಪಾಸಣೆ ಕಾರ್ಯ ವೀಕ್ಷಿಸಿದರು. ಕುಂಟು ನೆಪ ಹೇಳಿ ಹೊರಬಂದಿದ್ದ ವಾಹನಗಳನ್ನು ಸೀಜ್ ಮಾಡಲಾಯಿತು. ಸೂಕ್ತ ದಾಖಲಾತಿ ಇಲ್ಲದವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಲಾಯಿತು.
ಅನಗತ್ಯವಾಗಿ ಹೊರಬರದಂತೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ! ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ, ಬೆಳಗ್ಗೆಯಿಂದ ನಿರಂತರವಾಗಿ ವಾಹನ ಪರಿಶೀಲನೆ ಮಾಡುತ್ತಿದ್ದೇವೆ. ರಸ್ತೆಯಲ್ಲಿ ಅನವಶ್ಯಕ ಓಡಾಟ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಪೂರ್ವ ವಿಭಾಗದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕ್ರಮ: ಬೆಳಗಾವಿ ಪೊಲೀಸ್ ಆಯುಕ್ತರ ಎಚ್ಚರಿಕೆ
ಅವಶ್ಯಕ ಕಾರಣಗಳನ್ನು ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂತಹವರಿಗೆ ನಾವು ಲಾಠಿ ರುಚಿ ತೋರಿಸುತ್ತಿದ್ದೇವೆ. ಪೂರ್ವ ವಿಭಾಗದಲ್ಲಿ 40ಕ್ಕೂ ಹೆಚ್ಚು ಕಡೆ ಚೆಕ್ ಪೋಸ್ಟ್ ಹಾಕಿದ್ದೇವೆ. ಎಲ್ಲರೂ ಸರ್ಕಾರದ ನಿಯಮ ಪಾಲಿಸಬೇಕು ಎಂದರು.