ಕರ್ನಾಟಕ

karnataka

ETV Bharat / state

ರೈಲಿಗೆ ತಲೆ ಕೊಟ್ಟು ಯುವ ವೈದ್ಯ ಸಾವು ಪ್ರಕರಣ: ಸಾವಿನ ಹಿಂದೆ ಅಡಗಿತ್ತು ಹನಿಟ್ರ್ಯಾಪ್! - ವೈದ್ಯೆ ಆತ್ಮಹತ್ಯೆ ಪ್ರಕರಣ

ರೈಲಿಗೆ ತಲೆ ಕೊಟ್ಟು ಯುವ ವೈದ್ಯ ಸಾವಿನ ಹಿಂದೆ ಹನಿಟ್ರ್ಯಾಪ್ ಅಡಗಿರುವುದು ಬೆಳಕಿಗೆ ಬಂದಿದೆ.

Honeytrap is reason for young doctor suicide, Bangalore crime news, doctor suicide case, Bengaluru news, ಯುವ ವೈದ್ಯೆ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ, ಬೆಂಗಳೂರು ಅಪರಾಧ ಪ್ರಕರಣ, ವೈದ್ಯೆ ಆತ್ಮಹತ್ಯೆ ಪ್ರಕರಣ, ಬೆಂಗಳೂರು ಸುದ್ದಿ,
ರೈಲಿಗೆ ತಲೆ ಕೊಟ್ಟು ಯುವ ವೈದ್ಯ ಸಾವು ಪ್ರಕರಣ

By

Published : Jan 18, 2022, 1:20 PM IST

ಬೆಂಗಳೂರು:ಕಳೆದ ವರ್ಷ ಆಗಸ್ಟ್​​ನಲ್ಲಿ ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವ ವೈದ್ಯನ ಪ್ರಕರಣ ತಿರುವು ಪಡೆದು ಕೊಂಡಿದೆ. ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂಬುದು ರೈಲ್ವೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪಾಲ್ ಮೂಲದ ಸಾರ್ಥಕ್ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ಬಹಳಷ್ಟು ಮಂದಿಗೆ ವಂಚನೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಓದಿ:Punjab Election: ಪಂಜಾಬ್​ಗೆ ಚುನಾವಣೆಗೆ ಸಿಎಂ ಅಭ್ಯರ್ಥಿ ಘೋಷಿಸಿದ ಆಪ್ ಪಕ್ಷ

ರೈಲಿಗೆ ತಲೆ ಕೊಟ್ಟು ಯುವ ವೈದ್ಯ ಸಾವು ಪ್ರಕರಣ

ಆಗಷ್ಟೇ ಎಂಬಿಬಿಎಸ್ ವ್ಯಾಸಂಗ ಮುಗಿಸಿದ್ದ ವೈದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರು. ಈ ವೇಳೆ, ಭೋಪಾಲ್ ಮೂಲದ ಆರೋಪಿ ಯುವತಿ ಎಂದು ನಕಲಿ ಟೆಲಿಗ್ರಾಮ್ ಹಾಗೂ ಇನ್​​ಸ್ಟಾಗ್ರಾಂ ಖಾತೆ ತೆರೆದು, ವೈದ್ಯನ ಜತೆ ಚಾಟಿಂಗ್ ಆರಂಭಿಸಿದ್ದಳು. ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳದಿದೆ. ಈ ವೇಳೆ, ಆರೋಪಿ ಯುವತಿ ಅಶ್ಲೀಲ ಫೋಟೋಗಳನ್ನು ಕಳುಹಿಸಿ, ವೈದ್ಯನಿಂದ ಕೆಲವೊಂದು ಫೋಟೋಗಳನ್ನು ಪಡೆದುಕೊಂಡು ಹನಿಟ್ರ್ಯಾಪ್ ಮಾಡಿದ್ದಾನೆ.

ವೈದ್ಯನ ಫೋಟೋಗಳನ್ನು ಇಟ್ಟುಕೊಂಡು ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದರಿಂದ ಹೆದರಿದ ವೈದ್ಯ ಸುಮಾರು 67 ಸಾವಿರ ರೂ. ಆತನ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೂ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಹೆದರಿದ ವೈದ್ಯ ಮೂರು ತಿಂಗಳ ಹಿಂದೆ ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ರೈಲ್ವೆ ವಿಭಾಗದ ಪೊಲೀಸರು ಮಾಹಿತಿ ನೀಡಿದರು. ಈ ಘಟನೆ ಕುರಿತು ತನಿಖೆ ಮುಂದುವರೆದಿದ್ದು, ಇನ್ನಷ್ಟು ಮಾಹಿತಿ ತನಿಖೆ ಪೂರ್ಣಗೊಂಡ ಬಳಿಕ ಲಭ್ಯವಾಗಲಿದೆ.

ABOUT THE AUTHOR

...view details