ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,874 ಪ್ರಕರಣಗಳು ದಾಖಲಾಗಿವೆ. ಐಸಿಎಂಆರ್ ಪೋರ್ಟಲ್ನಲ್ಲಿ ಒಟಿಪಿ ಸಮಸ್ಯೆ ಎದುರಾಗಿದ್ದು, ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ICMR ಪೋರ್ಟಲ್ ಸಮಸ್ಯೆ: ಬೆಂಗಳೂರಿನಲ್ಲಿ ಕಡಿಮೆ ಕೋವಿಡ್ ಪ್ರಕರಣ ದಾಖಲು - ಬೆಂಗಳೂರು ಕೋವಿಡ್ ಅಪ್ಡೇಟ್
ಬೆಂಗಳೂರಿನಲ್ಲಿ ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಐಸಿಎಂಆರ್ ಪೋರ್ಟಲ್ ಸಮಸ್ಯೆಯಿಂದ 2,874 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರಿನಲ್ಲಿ ಕಡಿಮೆ ಕೋವಿಡ್ ಪ್ರಕರಣಗಳು ದಾಖಲು
ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ಪೋರ್ಟಲ್ ಸಮಸ್ಯೆಯಿಂದಾಗಿ ಪಾಸಿಟಿವ್ ದೃಢಪಟ್ಟವರಿಗೆ ಬಿಯು ನಂಬರ್ ವಿತರಣೆ, ಆಸ್ಪತ್ರೆ ದಾಖಲಾತಿ, ಪಾಲಿಕೆಯಿಂದ ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಔಷಧಿ ವಿತರಣೆ, ಪ್ರಾಥಮಿಕ ಸಂಪರ್ಕಿತರ ಟೆಸ್ಟಿಂಗ್ಗೂ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕೋವಿಡ್ ಮರಣ ಮೃದಂಗ: 55 ಮಂದಿ ಬಲಿ!