ಬೆಂಗಳೂರು :ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ರಾಜ್ಯಾದ್ಯಂತ ವಿವಿಧ ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ರೈತರ ಕಿಚ್ಚಿಗೆ ಹಲವು ಕನ್ನಡ ಪರ ಸಂಘಗಳು, ವ್ಯಾಪಾರಿ ಸಂಘ ಹೀಗೆ ಹತ್ತು ಹಲವು ಸಂಘಟನೆಗಳು ಸಾಥ್ ನೀಡಿದ್ದವು. ತಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದ್ದರೂ ಈ ವೇಳೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆಯಿತು.
ಸಿಲಿಕಾನ್ ಸಿಟಿಯಲ್ಲಿ ಬಂದ್ ವೇಳೆ ಮರೆಯಾದ ಕೊರೊನಾ ರೂಲ್ಸ್..
ರಾಜ್ಯದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 8-9 ಸಾವಿರಕ್ಕೆ ಏರುತ್ತಿದೆ. ಕೊರೊನಾ ಕಂಟ್ರೋಲ್‌ಗೆ ಸರಣಿ ಲಾಕ್ ಡೌನ್ ಗಳನ್ನ ಅನುಸರಿಸಿದ್ರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ನಿಯಮಗಳನ್ನ ಮೀರುವವರ ಸಂಖ್ಯೆಯೂ ಹೆಚ್ಚಿದೆ. ಇಂದಿನ ಬಂದ್ ಸಮಯದಲ್ಲೂ ಅದೇ ಆಗಿದೆ..
ಅಂದಹಾಗೇ, ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆತಂಕವೂ ಕಡಿಮೆಯಿಲ್ಲ. ನಿತ್ಯ ಸೋಂಕಿತರ ಸಂಖ್ಯೆ 8-9 ಸಾವಿರಕ್ಕೆ ಏರುತ್ತಿದೆ. ಕೊರೊನಾ ಕಂಟ್ರೋಲ್‌ಗೆ ಸರಣಿ ಲಾಕ್‌ಡೌನ್ ಗಳನ್ನ ಅನುಸರಿಸಿದ್ರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಗಿದೆ.
ಈ ಬಗ್ಗೆ ಈಟಿವಿ ಭಾರತ್‌ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಪಾಟೀಲ್ ಓಂಪ್ರಕಾಶ್, ಸಾಂಕ್ರಾಮಿಕ ಕೊರೊನಾ ರೋಗ ಹಬ್ಬುತ್ತಿರುವ ಸಮಯದಲ್ಲಿ ಕೊರೊನಾ ನಿಯಮಗಳನ್ನು ಪಾಲನೆ ಮಾಡದೇ ನಿಯಮ ಉಲ್ಲಂಘಿಸಿದ್ದಕ್ಕೆ ಪ್ರತಿಭಟನೆಯಲ್ಲಿ ಭಾಗಿಯಾದ ಸಂಘಟನೆಗಳಿಗೆ ಈ ಸಂಬಂಧ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.