ಬೆಂಗಳೂರು: ನಿತ್ಯ 8-9 ಸಾವಿರ ಗಡಿದಾಟುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಬಹಳ ದಿನಗಳ ನಂತರ ಇಂದು 5,773 ಪಾಸಿಟಿವ್ ಕೇಸ್ ದೃಢವಾಗಿದೆ. ಈ ಮೂಲಕ ಈವರೆಗೆ 4,04,324 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ.
ರಾಜ್ಯದಲ್ಲಿ 4 ಲಕ್ಷ ದಾಟಿದ ಸೋಂಕಿತರ ಸಂಖ್ಯೆ; ಒಂದೇ ದಿನ 141 ಕೊರೊನಾಗೆ ಬಲಿ - ಬೆಂಗಳೂರು ಕೊರೊನಾ ಸುದ್ದಿ
ನಗರದಲ್ಲಿ ಇಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 8015 ಡಿಸ್ಜಾರ್ಜ್ ಆಗಿದ್ದಾರೆ.

ಒಂದೇ ದಿನ 141 ಕೊರೊನಾಗೆ ಬಲಿ
ಮತ್ತೊಂದು ಕಡೆ ಇಂದಿನ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 8015 ಡಿಸ್ಜಾರ್ಜ್ ಆಗಿದ್ದಾರೆ. ಇನ್ನು 3,00,770 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.
ಇಂದು ಒಂದೇ ದಿನ 141 ಸೋಂಕಿತರು ಕೋವಿಡ್ ಗೆ ಬಲಿಯಾಗಿದ್ದು 6534ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ 97,001 ಪ್ರಕರಣಗಳು ಇದ್ದು, 794 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 51,5764 ಜನರು ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. 33,93,676 ಮಂದಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.
Last Updated : Sep 7, 2020, 10:48 PM IST