ಕರ್ನಾಟಕ

karnataka

ETV Bharat / state

ಎಲ್ಲೇ ಹೋಗಿ ಆದ್ರೆ ಮಾಸ್ಕ್​ ಧರಿಸಿ: ಇಲ್ಲದಿದ್ದರೆ ಕೇಸ್​​​​​​​​​​​​​​​​​​​​​​​​ ಪಕ್ಕಾ -  ಕಮಿಷನರ್​ ವಾರ್ನಿಂಗ್​ - ಕಮಿಷನರ್​ ವಾರ್ನಿಂಗ್​

ಬೆಂಗಳೂರು ಸಿಟಿ ಜನತೆ ಯಾರಾದರೂ ಮಾಸ್ಕ್ ಹಾಕಿಲ್ಲದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಹೀಗಾಗಿ ಮಹಾ ನಗರದ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂದು ಆಯುಕ್ತರು ಸೂಚನೆ ಕೊಟ್ಟಿದ್ದಾರೆ.

commissioner
ಭಾಸ್ಕರ್ ರಾವ್

By

Published : Jun 29, 2020, 1:55 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಹೆಚ್ಚುತ್ತಿರುವ ಕಾರಣ ಸದ್ಯ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.

ಈಗಾಗಲೇ ಬಿಬಿಎಂಪಿ ಹಾಗೂ ಮಾರ್ಷಲ್​ಗಳು, ಪೊಲೀಸರು ಫೀಲ್ಡಿಗೆ ಇಳಿದಿದ್ದು, ಇವರಿಗೆ ಇನ್ಮುಂದೆ ನಗರದ ಡಿಸಿಪಿಗಳು ಕೂಡ ಸಾಥ್ ನೀಡಲಿದ್ದಾರೆ ಎಂದು ಸ್ವತಃ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಆಯುಕ್ತ ಭಾಸ್ಕರ್ ರಾವ್ ಟ್ವೀಟ್

ಸಿಟಿ ಜನತೆ ಯಾರಾದರೂ ಮಾಸ್ಕ್ ಹಾಕಿಲ್ಲ ಎಂದರೆ ಕ್ರಿಮಿನಲ್ ಕೇಸ್ ದಾಖಲಿಸಿ, ಎಲ್ಲ ಬೆಂಗಳೂರು ಜನತೆ ಮಾಸ್ಕ್ ಧರಿಸಬೇಕು.‌ ಒಂದು ವೇಳೆ, ಯಾರಾದರೂ ಮಾತು ಕೇಳಿಲ್ಲ ಎಂದರೆ ನಮ್ಮ 100 ನಂಬರ್​​ಗೆ ಕರೆ ಮಾಡಿ ಹಾಗೆ ಮಾಸ್ಕ್ ಇಲ್ಲದವರಿಗೆ ಮಾಸ್ಕ್​ ವಿತರಕರು ನೀಡುವಂತೆ ಮನವಿ ಮಾಡಿದ್ದಾರೆ.

ಹೀಗಾಗಿ ಸಿಟಿ ಜನತೆ ಎಲ್ಲಿಗೇ ತೆರಳಿ ಮುಖಗವಸು ಹಾಕೋದು ಕಡ್ಡಾಯವಾಗಿದೆ. ಒಂದು ವೇಳೆ ಹಾಕದೇ ಇದ್ದರೆ ಖಾಕಿ ನಿಮ್ಮ ಮೇಲೆ ಕಣ್ಣಿಡಲಿದೆ ಎಂದು ಆಯುಕ್ತರು ವಾರ್ನ್​ ಮಾಡಿದ್ದಾರೆ.

ABOUT THE AUTHOR

...view details