ಕರ್ನಾಟಕ

karnataka

ETV Bharat / state

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಾಳೆಯಿಂದ ಭೌತಿಕ ತರಗತಿಗಳು ಪುನಾರಂಭ - ಭೌತಿಕ ತರಗತಿ ಪ್ರಾರಂಭ

ರಾಜ್ಯದಲ್ಲಿ ಕೊರೊನಾ‌‌ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವಿಟಿ‌ ದರ 1.21% ರಷ್ಟಿದೆ.‌ ಹೀಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಾಳೆಯಿಂದ ಭೌತಿಕ ತರಗತಿಗಳನ್ನು ಪುನಾರಂಭ ಮಾಡಲಾಗುತ್ತಿದೆ.

bangalore
ಕೊಠಡಿಗಳಿಗೆ ಸ್ಯಾನಿಟೈಸ್

By

Published : Jul 25, 2021, 3:37 PM IST

Updated : Jul 25, 2021, 7:51 PM IST

ಬೆಂಗಳೂರು: ಕತೆಯೊಂದ ಹೇಳಿದೆ.. ಬರಿ ಗುರುತುಗಳೇ ಕಾಲೇಜಲಿ. ಕ್ಲಾಸ್​ ರೂಮಿನ ಬೆಂಚಲಿ ಕಾರಿಡಾರ್ ವಾಲಲಿ ಸಾಲದೇ.. ಗುರುತೊಂದನು ನಾ ಗೀಚಿದೆ ಫ್ರೆಂಡ್ಶಿಪ್​​ನ ನೆಪದಲಿ.. ಎಂಬ ಹಾಡಿನ ಗುಂಗಿನೊಂದಿಗೆ ಕಾಲೇಜು ವಿದ್ಯಾರ್ಥಿಗಳು ನಾಳೆಯಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.‌

ಕೋವಿಡ್​​ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳು ಆನ್​​ಲೈನ್ ಕ್ಲಾಸ್​ ಮೊರೆ ಹೋಗಬೇಕಾಯ್ತು. ತಮ್ಮ ಅರ್ಧ ಸಮಯವನ್ನು ಕಾಲೇಜಿನಲ್ಲಿಯೇ ಕಳೆಯುತ್ತಿದ್ದ ವಿದ್ಯಾರ್ಥಿಗಳು, ಈ ಕಡೆ ಸುಳಿಯದೆ ವರ್ಷಗಳೇ ಕಳೆದಿವೆ. ಸದ್ಯ ಕೊರೊನಾ‌‌ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವಿಟಿ‌ ದರ 1.21% ರಷ್ಟಿದೆ.‌ ಹೀಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಾಳೆಯಿಂದ ಭೌತಿಕ ತರಗತಿಗಳನ್ನು ಪುನಾರಂಭಿಸಲಾಗುತ್ತಿದೆ.

ನಾಳೆಯಿಂದ ಭೌತಿಕ ತರಗತಿ ಪ್ರಾರಂಭ- ಕೊಠಡಿಗಳಿಗೆ ಸ್ಯಾನಿಟೈಸ್

ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ವಿವಿಯ ಎಲ್ಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ. ನಿನ್ನೆಯಿಂದಲೇ ಸ್ಯಾನಿಟೈಸ್ ಕೆಲಸವನ್ನ ಶುರು ಮಾಡಿರುವ ಆಡಳಿತ ಮಂಡಳಿ, ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುತ್ತಿದೆ.

ಬಹು ಸಮಯದ ನಂತರ ಕ್ಯಾಂಪಸ್​​ಗೆ ವಾಪಸ್​​ ಆಗುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಅದ್ದೂರಿಯಾಗಿ ಸ್ವಾಗತಿಸಲು ಈಗಾಗಲೇ ತಯಾರಿ ನಡೆಸಲಾಗಿದೆ. ಕೋವಿಡ್​​ ಲಾಕ್​​ಡೌನ್​​ನಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ದೂರ ಉಳಿದಿದ್ದರು. ಹೀಗಾಗಿ, ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹಿಸಲು, ಕೊರೊನಾ‌ ಭಯವನ್ನ ಹೋಗಲಾಡಿಸಿ ಹುರಿದುಂಬಿಸಲು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಒಟ್ಟಾರೆ, ವಿದ್ಯಾರ್ಥಿಗಳಿಲ್ಲದೆ ಬಣಗುಡುತ್ತಿದ್ದ ಕ್ಯಾಂಪಸ್​​ನಲ್ಲಿ ಇನ್ಮುಂದೆ ಆಟ-ಪಾಠ, ಹರಟೆ ಎಲ್ಲವೂ ಇರಲಿದೆ.

Last Updated : Jul 25, 2021, 7:51 PM IST

ABOUT THE AUTHOR

...view details