ಬೆಂಗಳೂರು:ಕೊರೊನಾ ವಾರಿಯರ್ ಆಗಿ ಪೊಲೀಸರು ಕಾರ್ಯ ನಿರ್ವಹಣೆ ಮಾಡ್ತಿರುವ ಕಾರಣ, ಹಾಗೆ ಹಲವು ಪೊಲೀಸರು ಕೊರೊನಾಗೆ ತುತ್ತಾಗಿರುವದರಿಂದ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್ ಬುಕ್ ಲೈವ್ನಲ್ಲಿ ಮಾತಾಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಐವರು ಸಿಬ್ಬಂದಿ ಕೋವಿಡ್ - 19 ಗೆ ಬಲಿಯಾಗಿದ್ದಾರೆ. ಹಾಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೃತ ಸಿಬ್ಬಂದಿ ಕುಟುಂಬದವರ ಜೊತೆಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಮೃತ ಐವರು ಸಿಬ್ಬಂದಿ ಸಹ ಪೊಲೀಸ್ ಇಲಾಖೆಗೊಸ್ಕರ ಹುತಾತ್ಮರಾದವರು. ನಿಜಕ್ಕು ಇವರ ಸಾವು ನಮ್ಮ ಇಲಾಖೆಗೆ ದುಃಖ ತಂದಿದೆ ಎಂದಿದ್ದಾರೆ.
ಹಾಗೆ ಸದ್ಯ 150 ಕ್ಕೂ ಅಧಿಕ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದಾರೆ. ಹಾಗೆ ಕೆಲ ಸಿಬ್ಬಂದಿ ಗುಣಮುಖರಾಗಿದ್ದು, ಸೋಂಕಿತರ ಸಂಪರ್ಕದಲ್ಲಿರುವ 650 ಕ್ಕೂ ಹೆಚ್ಚು ಸಿಬ್ಬಂದಿ ಕ್ವಾರಂಟೈನ್ನಲ್ಲಿದ್ದಾರೆ ಎಂದು ಮಾಹಿತಿ ನೀಡಿ, ಎಲ್ಲಾ ಸಿಬ್ಬಂದಿ ಆರೋಗ್ಯ ಕಾಪಾಡಿಕೊಳ್ಳಿ ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ 1.5 ಕೋಟಿ ಜನ ಸಂಖ್ಯೆಯಿದ್ದು, ಹೀಗಾಗಿ ನಗರದಲ್ಲಿ ಸುಮಾರು 20 ಸಾವಿರ ಪೊಲೀಸರಿದ್ದಾರೆ. ಸುರಕ್ಷತಾ ನಿಯಯ ಪಾಲನೆ ಸಾರ್ವಜನಿಕರ ಕರ್ತವ್ಯವಾಗಿದ್ದು, ದಯವಿಟ್ಟು ಕ್ಷುಲ್ಲಕ ಕಾರಣಕ್ಕೆ ಠಾಣೆ ಮೆಟ್ಟಿಲೇರಬೇಡಿ ಎಂದು ಮನವಿ ಮಾಡಿದ್ದಾರೆ.
ಪೊಲೀಸರಲ್ಲಿ ಕೊರೊನಾ ಲಕ್ಷಣ ಹೆಚ್ಚಾಗಿ ಕಂಡು ಬರ್ತಿರುವ ಕಾರಣ, ನಗರದಲ್ಲಿ ಇತರೆ ಪ್ರಕರಣಗಳೆಡೆಗೆ ಗಮನ ನೀಡಲು ಆಗುತ್ತಿಲ್ಲ. ಎಲ್ಲಾ ಸರಿಯಾದ ನಂತರ ಆ ಕಡೆ ಗಮನ ಹರಿಸುತ್ತೇವೆ. ಎಂದು ಫೇಸ್ ಬುಕ್ ಲೈವ್ನಲ್ಲಿ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.