ಬೆಂಗಳೂರು: ಅವಧಿ ಮುಗಿದ ಬಳಿಕವೂ ಪಾರ್ಟಿ ಆಯೋಜಿಸಿದ್ದ ಸ್ಟಾರ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಭಾಗಿಯಾಗಿದ್ದ ಸುಮಾರು 100 ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದಿದ್ದಾರೆ. ಜೀವನ್ ಭಿಮಾನಗರ ಠಾಣಾ ವ್ಯಾಪ್ತಿಯ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಕಳೆದ ಎರಡು ವಾರಾಂತ್ಯದಿಂದಲೂ ಓವರ್ ಟೈಂ ಪಾರ್ಟಿ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ಕಳೆದ ತಡರಾತ್ರಿ ದಾಳಿ ನಡೆಸಿದರು.
ಅವಧಿಗೂ ಮೀರಿ ಪಾರ್ಟಿ: ಬೆಂಗಳೂರಿನ ಸ್ಟಾರ್ ಹೋಟೆಲ್ ಮೇಲೆ ತಡರಾತ್ರಿ ಸಿಸಿಬಿ ದಾಳಿ
ನಗರದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಕಳೆದ ಎರಡು ವಾರಾಂತ್ಯದಿಂದ ಓವರ್ ಟೈಂ ಪಾರ್ಟಿ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿದರು.
ಸ್ಟಾರ್ ಹೋಟೆಲ್ ಮೇಲೆ ತಡರಾತ್ರಿ ಸಿಸಿಬಿ ದಾಳಿ
ಬೆಳಗ್ಗಿನ ಜಾವ 3 ಗಂಟೆಯವರೆಗೂ ನಡೆಯುತ್ತಿದ್ದ ಪಾರ್ಟಿಯಲ್ಲಿ ಬಳಸುತ್ತಿದ್ದ ಮದ್ಯ ಹಾಗು 1.83 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ. ಜತೆಗೆ, ಅನಧಿಕೃತವಾಗಿ ಪಬ್ ನಡೆಸುತ್ತಿದ್ದ 7 ಜನರನ್ನೂ ವಶಕ್ಕೆ ಪಡೆಯಲಾಗಿದೆ. ಹೋಟೆಲ್ ಹಾಗು ಪಾರ್ಟಿ ಆಯೋಜಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ತಡರಾತ್ರಿ ರೇವ್ ಪಾರ್ಟಿ.. ಡ್ರಗ್ಸ್ ನಶೆಯಲ್ಲಿದ್ದ 33 ಜನರ ಬಂಧನ