ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಡ್ರಗ್ಸ್​ ಮಾರಾಟ: ಎಂಟು ಜನರನ್ನು ಬಂಧಿಸಿದ ಸಿಸಿಬಿ - Drug sellers arrested in Bangalore

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮಾದಕ ವಸ್ತುಗಳು ಮತ್ತು ದಂಧೆಗೆ ಬಳಸುತ್ತಿದ್ದ ಕೆಲವು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಮಾದಕವಸ್ತು ಮಾರಾಟ
ಸಿಲಿಕಾನ್​ ಸಿಟಿಯಲ್ಲಿ ಮಾದಕವಸ್ತು ಮಾರಾಟ

By

Published : Feb 21, 2021, 12:19 PM IST

ಬೆಂಗಳೂರು: ಸಿಸಿಬಿ ಪೊಲೀಸರು ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಯುವಕರನ್ನು ಗುರಿಯಾಗಿಸಿಕೊಂಡು ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜಿರಿಯನ್‌ ಪ್ರಜೆಗಳನ್ನು ಬಂಧಿಸಲಾಗಿದೆ. ಅಗಸ್ಟೀನ್ ಓಕಾಫೋರ್ (38), ಅಚುನಿಜೆ ನಾಫೋರ್ (36) ಬಂಧಿತ ಆರೋಪಿಗಳು. ಬಂಧಿತರಿಂದ 20 ಗ್ರಾಂ ಕೊಕೇನ್, ಎಂಡಿಎಂಎ, 6 ಮೊಬೈಲ್, ಹೊಂಡಾ ಕಾರು ವಶಪಡಿಸಿಕೊಳ್ಳಲಾಗಿದೆ‌‌.

ಇದನ್ನೂ ಓದಿ:ತಮಿಳುನಾಡಿಗೆ ಸಿದ್ದರಾಮಯ್ಯ ಭೇಟಿ: ಕಾಳಿದಾಸ ಸೇವಾ ಸಮಿತಿ ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗಿ

ಮತ್ತೊಂದು ಪ್ರಕರಣದಲ್ಲಿ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ‌. ಮದನ್, ರಂಜಿತ್ ಕುಮಾರ್, ಮಹಾರ್ಸಾಯ್ಯ ನಾಯಕ್, ಚಂದನ್ ದಿಗಾಲ್, ಮುಕುಂದ್ ರಾಜ್, ಮೋನಿಶ್ ಬಂಧಿತ ಆರೋಪಿಗಳು. ಬಂಧಿತರಿಂದ 9.5 ಕೆಜಿ ಗಾಂಜಾ, ಒಂದು ಎಲೆಕ್ಟ್ರಾನಿಕ್ ತೂಕದ ಮಶೀನ್, ಐದು ಮೊಬೈಲ್, ಒಂದು ಬೈಕ್ ವಶಕ್ಕೆ‌‌ ಪಡೆದುಕೊಳ್ಳಲಾಗಿದೆ.

For All Latest Updates

ABOUT THE AUTHOR

...view details