ಬೆಂಗಳೂರು:ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.29) ರಂದು ಅದ್ಧೂರಿಯಾಗಿ ನಡೆಯುವ ಕಡಲೆಕಾಯಿ ಪರಿಷೆಗೆ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಈಗಾಗಲೇ ಬಸವನಗುಡಿಯಲ್ಲಿ ವ್ಯಾಪಾರ ಆರಂಭವಾಗಿದೆ.
ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಗುಲವನ್ನು ಸುಣ್ಣಬಣ್ಣಗಳಿಂದ ಸಿಂಗಾರ ಮಾಡಲಾಗುತ್ತಿದ್ದು, ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಪರಿಷೆಯಲ್ಲಿ ಕಡಲೆಕಾಯಿ ಹಾಗೂ ಇತರ ಸಣ್ಣಪುಟ್ಟ ಆಟಿಕೆಗಳ ಅಂಗಡಿ ಹಾಗೂ ದಿನಬಳಕೆ ವಸ್ತುಗಳು ಮಾರಾಟಕ್ಕೆ ಸಾವಿರಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ.
ಈಗಾಗಲೇ ಫುಟ್ಪಾತ್ಗಳಲ್ಲಿ ಕಡೆಲೆಕಾಯಿ ವ್ಯಾಪಾರ ಆರಂಭವಾಗಿದ್ದು, 1 ಕೆಜಿಗೆ 60 ರೂ ನಂತೆ, 1 ಸೇರಿಗೆ 25 ರಿಂದ 30 ರೂ. ನಂತೆ ಮಾರಾಟವಾಗುತ್ತಿದೆ. ಕಡಲೆಕಾಯಿ ಪರಿಷೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬಂದು ಕಡಲೆಕಾಯಿ ವ್ಯಾಪಾರದಲ್ಲಿ ತೊಡಗುತ್ತಾರೆ.