ಕರ್ನಾಟಕ

karnataka

ETV Bharat / state

ಏರೋ ಇಂಡಿಯಾ 2023.. ಪ್ರಧಾನಿ ಮೋದಿ ಚಾಲನೆ - ಪ್ರಧಾನಿ ಮೋದಿಯಿಂದ ಕರ್ನಾಟಕಕ್ಕೆ ಸರಣಿ ಭೇಟಿ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರು-ಪ್ರಧಾನಿ ಮೋದಿ ರಾಜ್ಯಕ್ಕೆ ಸರಣಿ ಭೇಟಿ- ಏರೋ ಇಂಡಿಯಾ 2023ಕ್ಕೆ ಚಾಲನೆ

Aerial show
ವೈಮಾನಿಕ ಪ್ರದರ್ಶನಕ್ಕೆ ನಡೆದ ತಾಲೀಮು

By

Published : Feb 13, 2023, 7:05 AM IST

Updated : Feb 13, 2023, 9:54 AM IST

ಯಲಹಂಕ/ಬೆಂಗಳೂರು:ಏರೋ ಇಂಡಿಯಾ 2023ಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ವೈಮಾನಿಕ ಪ್ರದರ್ಶನಕ್ಕೆ ಈಗಾಗಲೇ ತಾಲೀಮು ನಡೆದಿದೆ. ಶನಿವಾರ, ಭಾನುವಾರ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗಿದ್ದು, ಆಗಸದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ನೋಡಿದ ಪೇಕ್ಷಕರು ರೋಮಾಂಚಗೊಂಡರು.

ಏರೋ ಇಂಡಿಯಾ 2023

ಈಗಾಗಲೇ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲವರ ಪ್ರಾರಂಭವಾಗಿದೆ. ಇನ್ನೇನು ಭೂಮಿಗೆ ಅಪ್ಪಳಿಸುತ್ತು ಅನ್ನುವಾಗಲೇ ಹಠಾತನೇ ಮೇಲಕ್ಕೆ ಚಿಮ್ಮುವ ಲೋಹದ ಹಕ್ಕಿಗಳು ನೋಡುಗರಲ್ಲಿ ಹೃದಯ ಝಲ್ ಅನ್ನುವಂತೆ ಮಾಡಿತ್ತು. ವೀಕೆಂಡ್​ನಲ್ಲಿ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗಿದ್ದು, ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಸೇನೆ, ವಾಯುಸೇನೆ, ಬಿಎಸ್​ಎಫ್, ಮಾಧ್ಯಮ ಪ್ರತಿನಿಧಿಗಳ ಕುಟುಂಬಕ್ಕೆ ಅವಕಾಶ ನೀಡಲಾಗಿತ್ತು. ವೈಮಾನಿಕ ಪ್ರದರ್ಶವನ್ನ ಕಣ್ತುಂಬಿ ಕೊಳ್ಳಲು ಸಾವಿರಾರು ಜನರು ವಾಯುನೆಲೆಯಲ್ಲಿ ಜಮಾಯಿಸಿದ್ದರು.

ತೇಜಸ್, ಸುಖೊಯ್, ರಫೇಲ್ ಯುದ್ಧ ವಿಮಾನಗಳು ನಡೆಸಿದ ಕಸರತ್ತುಗಳು ನೋಡುಗರನ್ನು ರೋಮಾಂಚನಗಳಿಸಿತು. ಜೊತೆಗೆ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಹೆಚ್​ಎಎಲ್ ನಿರ್ಮಿಸಿದ ಹೆಲಿಕ್ಯಾಪ್ಟರ್​ಗಳು ಪ್ರದರ್ಶನ ಸಹ ಜನರನ್ನ ಆಕರ್ಷಿಸಿದವು.

ಏರೋ ಶೋ ನೋಡಲು ವಾಯುನೆಲೆಗೆ ಹರಿದು ಬಂದ ಜನಸಾಗರ ಮತ್ತು ವಾಹನಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಮ್ ಉಂಟು ಮಾಡಿತ್ತು. ಆಗಸದಲ್ಲಿ ನಡೆಯುತ್ತಿದ್ದ ಲೋಹದ ಹಕ್ಕಿಗಳ ಕಸರತ್ತುಗಳನ್ನು ಕಣ್ತುಂಬಿಕೊಳ್ಳಲು ವಾಹನ ಸವಾರರು ರಸ್ತೆಯಲ್ಲೇ ವಾಹನಗಳನ್ನ ನಿಲ್ಲಿಸಿದ್ದರು. ಇದರಿಂದ ಏರ್​ಪೋರ್ಟ್​​ ರಸ್ತೆಯಲ್ಲಿ ಮತ್ತಷ್ಟು ವಾಹನಗಳ ದಟ್ಟಣೆಗೆ ಕಾರಣವಾಗಿತ್ತು.

ಇಂದು ಏರೋ ಇಂಡಿಯಾ 2023ಗೆ ಮೋದಿಯಿಂದ ಚಾಲನೆ:ಏರೋ ಇಂಡಿಯಾ 2023ಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಅವರು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಗ್ಗೆ ರಾಜಭವನದಿಂದ ಯಲಹಂಕದ ವಾಯುನೆಲೆಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದರು. ಬೆ. 9:30 ರಿಂದ 11: 30ರ ವರೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಅಲ್ಲಿಂದಲೇ ವಾಯುಪಡೆ ವಿಮಾನದಲ್ಲಿ ಬೆ. 11:45ಕ್ಕೆ ತ್ರಿಪುರಕ್ಕೆ ತೆರಳಲಿದ್ದಾರೆ.

ಪ್ರಧಾನಿಯನ್ನು ಬರಮಾಡಿಕೊಂಡ ಸಿಎಂ ಬೊಮ್ಮಾಯಿ..:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್​ನಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-2023ರಲ್ಲಿ ಪಾಲ್ಗೊಳ್ಳಲು ಭಾರತೀಯ ವಾಯುಸೇನಾ ವಿಮಾನದ ಮೂಲಕ ಬೆಂಗಳೂರಿನ ಎಚ್.ಎ.ಎಲ್.ವಿಮಾನ ನಿಲ್ದಾಣಕ್ಕೆ ಭಾನುವಾರ ರಾತ್ರಿ ಬಂದಿಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಸಚಿವ ಭೈರತಿ ಬಸವರಾಜ್, ಶಾಸಕರಾದ ಅರವಿಂದ ಲಿಂಬಾವಳಿ, ಎ.ಕೃಷ್ಣಪ್ಪ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಡಿಜಿ ಮತ್ತು ಐಜಿಪಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಹೆಚ್.ಎ.ಎಲ್ ನ ಹಿರಿಯ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.

ಇದನ್ನೂ ಓದಿ:ಉತ್ಪಾದನೆ- ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

Last Updated : Feb 13, 2023, 9:54 AM IST

ABOUT THE AUTHOR

...view details